‘ಕೊರೊನಾ ದೊಡ್ಡ ಸಾಂಕ್ರಾಮಿಕ ರೋಗವಾಗಿದ್ದರೆ ಇವರೆಲ್ಲ ಇರೋಕಾಗ್ತಾ ಇತ್ತಾ?’; ಅಗ್ನಿ ಶ್ರೀಧರ್ ಪ್ರಶ್ನೆ

ನಿರ್ದೇಶಕ ಹಾಗೂ ಚಿತ್ರಕಥೆ ಬರಹಗಾರ ಅಗ್ನಿ ಶ್ರೀಧರ್ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ‘ಕೊವಿಡ್​ ಇಲ್ಲ. ಇದೊಂದು ಮೆಡಿಕಲ್​ ಮಾಫಿಯಾ’ ಎನ್ನುವ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

ಕೊವಿಡ್​ ಇದೆ ಮತ್ತು ಇಲ್ಲ ಎನ್ನುವ ಬಗ್ಗೆ ಕೊರೊನಾ ಕಾಣಿಸಿಕೊಂಡಾಗಿನಿಂದಲೂ ಚರ್ಚೆ ನಡೆಯುತ್ತಿದೆ. ಹಣ ಮಾಡಿಕೊಳ್ಳೋಕೆ ನಡೆಯುತ್ತಿರುವ ದಂಧೆ ಇದು ಎಂದು ಈ ಮೊದಲಿನಿಂದಲೂ ಹಲವರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ದೇಶದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಈಗ ಮೂರನೇ ಅಲೆಯ ಭಯದಲ್ಲಿ ಎಲ್ಲರೂ ಇದ್ದಾರೆ. ಕೊರೊನಾ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ಆತಂಕ ಮೂಡಿದೆ. ಅನೇಕ ಇಂಡಸ್ಟ್ರಿಗಳು ಅನಿಶ್ಚಿತತೆ ಎದುರಿಸುತ್ತಿವೆ. ಚಿತ್ರರಂಗಕ್ಕೆ ಕೊರೊನಾ ದೊಡ್ಡ ಹೊಡೆತ ನೀಡಿದೆ. ಸಿನಿಮಾ ಕೆಲಸಗಳು ನಿಂತಿವೆ. ಕೊವಿಡ್ ಕಾರಣದಿಂದ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಅವಕಾಶದ ನಿಯಮ ಬಂದಿರುವುದರಿಂದ ಯಾವ ಚಿತ್ರಗಳೂ ರಿಲೀಸ್​ ಆಗುತ್ತಿಲ್ಲ. ಈ ಮಧ್ಯೆ, ನಿರ್ದೇಶಕ ಹಾಗೂ ಚಿತ್ರಕಥೆ ಬರಹಗಾರ ಅಗ್ನಿ ಶ್ರೀಧರ್ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ‘ಕೊವಿಡ್​ ಇಲ್ಲ. ಇದೊಂದು ಮೆಡಿಕಲ್​ ಮಾಫಿಯಾ’ ಎನ್ನುವ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

ಇದನ್ನೂ ಓದಿ: ‘ಕೊರೊನಾ ಸುಳ್ಳು, ಇದೊಂದು ಮೆಡಿಕಲ್ ಮಾಫಿಯಾ’; ಸಂಚಲನ ಸೃಷ್ಟಿಸಿದ ಅಗ್ನಿ ಶ್ರೀಧರ್​​ ಹೇಳಿಕೆ

Click on your DTH Provider to Add TV9 Kannada