Loading video

ದಸರಾ ಮಹೋತ್ಸವದ ಜೊತೆ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಶಿವಕುಮಾರ್

|

Updated on: Apr 25, 2025 | 8:33 PM

ಸುದ್ದಿಗೋಷ್ಠಿಯಲ್ಲಿ ಕ್ರೆಸ್ಟ್ ಗೇಟ್​​ಗಳ ಬಗ್ಗೆ ಮಾತಾಡಿದ ಶಿವಕುಮಾರ್ ಅವರು ಕೆಆರ್​ಎಸ್ ಗೇಟ್ ಗಳ ಸಾಮರ್ಥ್ಯ ಮತ್ತು ಕ್ಷಮತೆಯ ಬಗ್ಗೆ ಪರಶಶೀಲನೆ ನಡೆಸಿ ಒಂದು ವರದಿಯನ್ನು ಸಲ್ಲಿಸಲು ತಿಳಿಸಲಾಗಿದೆ, ತುಂಗಭದ್ರಾ ಜಲಾಶಯದ ಗೇಟೊಂದು ಮುರಿದು ಅದಕ್ಕೆ ಬದಲೀ ಗೇಟಿನ ವ್ಯವಸ್ಥೆ ಮಾಡುವ ಸನ್ನಿವೇಶ ಸೃಷ್ಟಿಯಾದ ಹಿನ್ನೆಲೆಯಲ್ಲಿ ಎಲ್ಲ ಜಲಾಶಯಗಳ ಗೇಟ್​​ಗಳನ್ನು ಕ್ಷಮತೆ ಪರೀಕ್ಷಿಸುವ ಅವಶ್ಯಕತೆ ಏರ್ಪಟ್ಟಿದೆ ಎಂದು ಹೇಳಿದರು.

ಮಂಡ್ಯ, ಏಪ್ರಿಲ್ 25: ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್  ಬಹಳ ಉತ್ಸುಕರಾಗಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಂದು ಅವರು ಕೃಷ್ಣರಾಜ ಸಾಗರ ಡ್ಯಾಂ (KRS Dam) ವೀಕ್ಷಿಸಿದ ನಂತರ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಭೆ ಕೂಡ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಕಾವೇರಿ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಬಡವ ಬಲ್ಲಿದ ಎಲ್ಲರೂ ಭಾಗವಹಿಸಬಹುದೆಂದು ಹೇಳಿದರು. ಟಿಕೆಟ್ ಇರೋದು ನಿಜ, ಆದರೆ ಹಾಗಂತ ಟಿಕೆಟ್ ಖರೀದಿಸಿ ಕಾವೇರಿ ತಾಯಿಗೆ ಆರತಿ ಮತ್ತು ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶಕ್ತರಲ್ಲದವರು ವಾಪಸ್ಸು ಹೋಗಬೇಕಿಲ್ಲ, ಟಿಕೆಟ್ ಇಲ್ಲದೆಯೂ ಅವರು ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.

ಇದನ್ನೂ ಓದಿ:  ಪ್ರಾಯಶಃ ರಕ್ಷಣೆ ಕೇಳಲು ರಾಕೀ ರೈ ಡಿಸಿಎಂ ಶಿವಕುಮಾರ್​ರನ್ನು ಭೇಟಿಯಾಗಿರಬಹುದು: ರಿಕ್ಕಿ ರೈ ವಕೀಲ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ