ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ:ಜಿಪಿಎನ್ ಟ್ಯಾಕ್ಸಿ ಬಗ್ಗೆ ಸಿಎಂ ಆಸಕ್ತಿ
ಕರ್ನಾಟಕದಲ್ಲಿ ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಉದ್ದೇಶದಿಂದ ಜಪಾನ್ ನಗರ ಯೋಜನೆ ಮತ್ತು ಸಾರಿಗೆ ಮಾದಿರಗಳನ್ನು ಅಧ್ಯಯನ ಮಾಡಲು ಮುಖ್ಯಮಂತ್ರು ಡಿಕೆ ಶಿವಕುಮಾರ್ ಆಸಕ್ತಿ ತೋರಿದ್ದಾರೆ. ಹೌದು...ಜಪಾನ್ ಪ್ರವಾಸದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗೋಯಾದ ಸಕಾಏ (Sakae) ಭೂಗತ ಜಾಲವನ್ನು ವೀಕ್ಷಿಸಿದರು.
ಬೆಂಗಳೂರು, (ನವೆಂಬರ್ 24): ಕರ್ನಾಟಕದಲ್ಲಿ ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಉದ್ದೇಶದಿಂದ ಜಪಾನ್ ನಗರ ಯೋಜನೆ ಮತ್ತು ಸಾರಿಗೆ ಮಾದಿರಗಳನ್ನು ಅಧ್ಯಯನ ಮಾಡಲು ಮುಖ್ಯಮಂತ್ರು ಡಿಕೆ ಶಿವಕುಮಾರ್ ಆಸಕ್ತಿ ತೋರಿದ್ದಾರೆ. ಹೌದು…ಜಪಾನ್ ಪ್ರವಾಸದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗೋಯಾದ ಸಕಾಏ (Sakae) ಭೂಗತ ಜಾಲವನ್ನು ವೀಕ್ಷಿಸಿದರು. ಇದು ಮೆಟ್ರೋ ನಿಲ್ದಾಣಗಳು, ವಾಣಿಜ್ಯ ಕೇಂದ್ರಗಳು ಮತ್ತು ದೊಡ್ಡ ಕಟ್ಟಡಗಳನ್ನು ಭೂಗತ ದಾರಿಗಳು ಮತ್ತು ಶಾಪಿಂಗ್ ಜಾಗಗಳ ವಿಶಾಲ ಜಾಲದ ಮೂಲಕ ಒಂದಕ್ಕೊಂದು ಜೋಡಿಸುವ ಸಮಗ್ರ ನಗರ ಮೂಲಸೌಕರ್ಯ ವ್ಯವಸ್ಥೆಯಾಗಿದೆ. ಈ ಜೋಡಿತ ಜಾಲವು ಅಡೆತಡೆಯಿಲ್ಲದ ಸಂಪರ್ಕವನ್ನು ಹೇಗೆ ಕಲ್ಪಿಸುತ್ತದೆ, ನೆಲಮಟ್ಟದ ಮೂಲಸೌಕರ್ಯದ ಮೇಲಿನ ಅವಲಂಬನೆಯನ್ನು ಹೇಗೆ ಕಡಿಮೆ ಮಾಡುತ್ತದೆ ಮತ್ತು ಅಮೂಲ್ಯವಾದ ನಗರದ ಜಾಗವನ್ನು ಹೇಗೆ ಸಮರ್ಥವಾಗಿ ಬಳಸಲು ಅನುವು ಮಾಡಿಕೊಡುತ್ತದೆ ಎಂಬುದನ್ನು ಸಿಎಂ ಪರಿಶೀಲಿಸಿದರು.
ಮೆಟ್ರೋ ನಿಲ್ದಾಣ, ವಾಣಿಜ್ಯ ಕೇಂದ್ರಗಳ ಸಂಪರ್ಕ ವ್ಯವಸ್ಥೆ ಪರಿಶೀಲನೆ ಮಾಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳಲ್ಲಿ ಈ ಮಾದರಿ ಅಳವಡಿಕೆಗೆ ಚಿಂತನೆ ನಡೆಸಿದ್ದಾರೆ.ಅಲ್ಲದೇ ಟೊಯೋಟಾದ ಎಲ್‌ಪಿಜಿ-ಹೈಬ್ರಿಡ್ ‘ಜೆಪಿಎನ್ ಟ್ಯಾಕ್ಸಿ’ ಬಗ್ಗೆ ಸಿಎಂ ಒಲವು ತೋರಿದ್ದಾರೆ. ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡಿರುವ ಟ್ಯಾಕ್ಸಿ ಮಾದರಿ ಇದಾಗಿದೆ.
