ಕೋಲಾರದಲ್ಲಿ ಡಿಕೆ ಶಿವಕುಮಾರ್ ಅಬ್ಬರದ ಭಾಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆರಗಾದರೆ?

|

Updated on: Apr 06, 2024 | 7:29 PM

ನೀವು ನಮ್ಮ ಕೈಗಳನ್ನು ಬಲಪಡಿಸಿದರೆ ತಾವು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಲು ನೆರವಾಗುತ್ತದೆ ಎಂದು ಶಿವಕುಮಾರ್ ಹೇಳಿದರು. ಅವರು ಅಬ್ಬರದಿಂದ ಭಾಷಣ ಮಾಡುತ್ತಿದ್ದರೆ ಸಿದ್ದರಾಮಯ್ಯ ಮುಂದಕ್ಕೆ ಬಾಗಿ ಅವರು ಮುಖ ನೋಡಿದ್ದು ವಿಶೇಷವೆನಿಸಿತು

ಕೋಲಾರ: ಕೋಲಾರದ ಮುಳುಬಾಗಿಲುನಲ್ಲಿ ಚುನಾವಣಾ ಪ್ರಚಾರ (campaigning) ಆರಂಭಿಸಿದ ಕಾಂಗ್ರೆಸ್ ನಾಯಕರು ರ್ಯಾಲಿಯಲ್ಲಿ ಅಬ್ಬರದ ಭಾಷಣಗಳನ್ನು ಮಾಡಿದರು. ಸಿದ್ದರಾಮಯ್ಯನವರ (Siddaramaiah) ಮಾತು ಮುಗಿದ ಬಳಿಕ ಮೈಕ್ ಕೈಗೆತ್ತಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಕೋಲಾರ ಯಾವತ್ತಿಗೂ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ, ಹಾಗಾಗಿ ಮತದಾರರು ಯುವ ನಾಯಕ ಮತ್ತು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಪರ ಮತ ಚಲಾಯಿಸಿ ಸಿದ್ದರಾಮಯ್ಯ ಮತ್ತು ತನ್ನ ಕೈ ಬಲಪಡಿಸಬೇಕು ಎಂದು ಜನರನ್ನು ಆಗ್ರಹಿಸಿದರು. ನೀವು ನಮ್ಮ ಕೈಗಳನ್ನು ಬಲಪಡಿಸಿದರೆ ತಾವು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಲು ನೆರವಾಗುತ್ತದೆ ಎಂದು ಶಿವಕುಮಾರ್ ಹೇಳಿದರು. ಅವರು ಅಬ್ಬರದಿಂದ ಭಾಷಣ ಮಾಡುತ್ತಿದ್ದರೆ ಸಿದ್ದರಾಮಯ್ಯ ಮುಂದಕ್ಕೆ ಬಾಗಿ ಅವರು ಮುಖ ನೋಡಿದ್ದು ವಿಶೇಷವೆನಿಸಿತು. ಮುಖ್ಯಮಂತ್ರಿಯ ಸ್ಥಾನಕ್ಕಾಗಿ ಅವರಿಬ್ಬರ ನಡುವೆ ಏನೇ ವೈಮನಸ್ಸುಗಳಿದ್ದರೂ ಸಾರ್ವಜನಿಕವವಾಗಿ ಅವರು ಅದನ್ನು ಇದುವರೆಗೆ ಪ್ರದರ್ಶಿಸಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹಿಂದೂವಾಗಿ ನಾನು ಸಾಯಲಾರೆ ಎಂದು ಅಂಬೇಡ್ಕರ್ ಬೌದ್ಧ ಧರ್ಮ ಸೇರಿದರು: ಸಿದ್ದರಾಮಯ್ಯ