ರಾಜಶೇಖರ್ ತಾಯಿಗೆ ಡಿಕೆ ಶಿವಕುಮಾರ್ ಸಾಂತ್ವನ: ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ
ಬಳ್ಳಾರಿಗೆ ಭೇಟಿ ನೀಡಿದ ಡಿಕೆಶಿ, ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ತಾಯಿ ತುಳಸಿ ಅವರಿಗೆ ಸಾಂತ್ವನ ಹೇಳಿದರು. 27 ವರ್ಷದ ರಾಜಶೇಖರ್ ಕುಟುಂಬಕ್ಕೆ ಆಧಾರವಾಗಿದ್ದನು. ತಾಯಿ ತುಳಸಿ ನ್ಯಾಯಕ್ಕಾಗಿ ಮತ್ತು ಮಗನ ಆತ್ಮಕ್ಕೆ ಶಾಂತಿಗಾಗಿ ಕಣ್ಣೀರಿಟ್ಟು ಮನವಿ ಮಾಡಿದರು. ಕುಟುಂಬಕ್ಕೆ ಪಕ್ಷದ ಬೆಂಬಲವಿದೆ ಎಂದು ಡಿಕೆಶಿ ಭರವಸೆ ನೀಡಿದ್ದಾರೆ.
ಬಳ್ಳಾರಿ, ಜನವರಿ 06: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರಾಜಶೇಖರ್ ನಿವಾಸಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಮುಂದೆ ಮೃತ ರಾಜಶೇಖರ ತಾಯಿ ತುಳಸಿ ಅವರು ಕಣ್ಣೀರು ಹಾಕಿದರು. ಇಡೀ ಮನೆಗೆ ರಾಜಶೇಖರ್ ಆಧಾರವಾಗಿದ್ದ ಎಂದು ಕಣ್ಣೀರು ಹಾಕಿದರು. ಇಡೀ ಪಕ್ಷವೇ ರಾಜಶೇಖರ ಕುಟುಂಬಸ್ಥರ ಜೊತೆ ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದಿಂದ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
