ಹೊಸದಾಗಿ ಬಿಎಂಟಿಸಿ ಬಸ್ ಸೇರ್ಪಡೆ; ಆ ಬಸ್ಗಳ ವಿಶೇಷತೆ ಏನೇನು ಗೊತ್ತಾ? ಇಲ್ಲಿದೆ ನೋಡಿ
ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಹೊಸ ಬಸ್ ಖರೀದಿ ಮಾಡುತ್ತಿದೆ. ಅದರಂತೆ ಬಿಎಂಟಿಸಿಗೆ ಹೊಸದಾಗಿ 840 ಬಸ್ಗಳು ಸೇರ್ಪಡೆಯಾಗಲಿದೆ. ಇದೀಗ ಮೊದಲ ಹಂತದಲ್ಲಿ 100 ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಇಂದು(ಸೆ.12) ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಚಾಲನೆ ನೀಡಿದರು.
ಬೆಂಗಳೂರು, ಸೆ.12: ಬಸ್ ಪ್ರಯಾಣಿಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಹೊಸ ಬಸ್ ಖರೀದಿ ಮಾಡುತ್ತಿದೆ. ಅದರಂತೆ ಬಿಎಂಟಿಸಿ(BMTC)ಗೆ ಹೊಸದಾಗಿ 840 ಬಸ್ಗಳು ಸೇರ್ಪಡೆಯಾಗಲಿದೆ. ಇದೀಗ ಮೊದಲ ಹಂತದಲ್ಲಿ 100 ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಇಂದು(ಸೆ.12) ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಚಾಲನೆ ನೀಡಿದರು.
ಹೊಸ ಮಾದರಿಯ BS 6 ಬಸ್ ವಿಶೇಷತೆಗಳು
- ಪರಿಸರ ಸ್ನೇಹಿ ಬಸ್
- ಬಿಎಸ್ 4 ಬಸ್ ಗೆ ಹೋಲಿಸಿದ್ರೆ ಶೇಕಡಾ 90 ರಷ್ಟು ಮಾಲಿನ್ಯ ಮಟ್ಟ ಕಮ್ಮಿ
- 11 ಮೀಟರ್ ಉದ್ದ, ಹವಾನಿಯಂತ್ರಣರಹಿತ, ಡೀಸೆಲ್ ಚಾಲಿತ ಬಸ್
- ಪ್ರಯಾಣಿಕರ ಸುರಕ್ಷತೆಗಾಗಿ 3 ಸಿಸಿಟಿವಿ ಅಳವಡಿಕೆ
- 3 ಎಲ್.ಇ.ಡಿ ಬೋರ್ಡ್
- ವಾಯ್ಸ್ ಅನೌನ್ಸ್ಮೆಂಟ್ ವ್ಯವಸ್ಥೆ
- ಮಹಿಳೆಯರ ಸೇಫ್ಟಿಗೆ ತುರ್ತು ಪ್ಯಾನಿಕ್ ಅಲಾರ್ಮ್ ಬಟನ್
- ಅಗ್ನಿ ಅವಘಡ ತಪ್ಪಿಸಲು FDAS ( fire detection and alarm system)
- ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ನಿಲುಗಡೆಗೆ ಸ್ಟಾಪ್ ಬಟನ್
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos