AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?

ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?

ರಾಜೇಶ್ ದುಗ್ಗುಮನೆ
|

Updated on: May 08, 2026 | 8:47 AM

Share

ಎರಡನೇ ಪತ್ನಿ ಬೇಕು ಅಂದ್ರೆ ನಗು ಎಂಬ ಉತ್ತರವನ್ನು ಬರೆದುಕೊಟ್ಟಿದ್ದಾರೆ ಕವಿತಾ ಗೌಡ. ಇದಕ್ಕೆ ಚಂದನ್ ಕುಮಾರ್ ನಕ್ಕಿದ್ದಾರೆ. ಒಂದನ್ನೇ ತಡೆದುಕೊಳ್ಳೋಕೆ ಆಗಲ್ಲ ಎಂದಿರೋ ಅವರು, ಎರಡನೇ ಪತ್ನಿ ಬೇಕು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆ ಫನ್ ವಿಡಿಯೋ ವೈರಲ್ ಆಗಿದೆ.

ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ‘ಎರಡನೇ ಪತ್ನಿ ಬೇಕು ಅಂತಾದ್ರೆ ನಗಬೇಕು’ ಎಂದು ಬರೆದಿರುವ ಚೀಟಿಯನ್ನು ಕವಿತಾ ಅವರು ಚಂದನ್​ಗೆ ನೀಡುತ್ತಾರೆ. ಆಗ ನಗುವ ಚಂದನ್, ‘ಒಂದನ್ನೇ ತಡೆದುಕೊಳ್ಳೋಕೆ ಆಗ್ತಿಲ್ಲ’ ಎಂದಿದ್ದಾರೆ. ‘ಅವರು ನಕ್ಕಿದ್ದಾರೆ, ಅವರಿಗೆ ಎರಡನೇ ಪತ್ನಿ ಬೇಕು ಎಂಬ ಆಸೆ ಇದೆ. ಆದರೆ, ಕವಿತಾ ಮೇಲೆ ಅವರಿಗೆ ಭಯವೂ ಇದೆ’ ಎಂದು ಕೆಲವರು ನಗೆ ಚಟಾಕಿ ಹಾರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More