ಕಾವೇರಿ ನದಿಯಲ್ಲಿ ಮುಳುಗಡೆಯಾಯ್ತು ದೋಣಿ ಕಡವು ಗ್ರಾಮ; ಪ್ರಾಣ ಕೈಯಲ್ಲಿ ಹಿಡಿದು ಪ್ರವಾಹ ದಾಟುತ್ತಿರೋ ಜನರು
ಕರ್ನಾಟಕದ ಹಲವೆಡೆ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ಕೊಡಗು ಜಿಲ್ಲೆಯ ದೋಣಿಕಡವು, ಕೂಡಕಂಡಿ ಪರಂಬು ಗ್ರಾಮಗಳು ಕಾವೇರಿ ನದಿಯಲ್ಲಿ ಮುಳುಗಡೆಯಾಗಿವೆ. ಈ ಹಿನ್ನಲೆ ನಾಡ ದೋಣಿಯನ್ನು ಬಳಕೆ ಮಾಡಿ, ಅಲ್ಲಿನ ಜನರು ತುಂಬಿದ ಪ್ರವಾಹ ದಾಟಲು ಹರಸಾಹಸ ಪಡುತ್ತಿದ್ದಾರೆ.
ಕೊಡಗು, ಜು.26: ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಹಲವಾರು ಗ್ರಾಮಗಳು ಮುಳುಗಡೆಯಾಗಿದೆ. ಅದರಂತೆ ಕಾವೇರಿ ನದಿಯಲ್ಲಿ ಕೊಡಗು ಜಿಲ್ಲೆಯ ದೋಣಿಕಡವು, ಕೂಡಕಂಡಿ ಪರಂಬು ಗ್ರಾಮಗಳು ಮಳೆಗೆ ಜಲಾವೃತವಾಗಿದೆ. ಈ ಹಿನ್ನಲೆ ನಾಡ ದೋಣಿಯನ್ನು ಬಳಕೆ ಮಾಡಿ, ಅಲ್ಲಿನ ಜನರು ತುಂಬಿದ ಪ್ರವಾಹ ದಾಟಲು ಹರಸಾಹಸ ಪಡುತ್ತಿದ್ದಾರೆ. ಹೌದು, ಭಾರಿ ಗಾಳಿ-ಮಳೆಗೆ ಪ್ರವಾಹದಲ್ಲಿ ದೋಣಿ ಓಲಾಡುತ್ತಿದೆ. ಅದರಲ್ಲಿಯೇ ಪ್ರಾಣ ಕೈಯಲ್ಲಿ ಹಿಡಿದು ಪ್ರವಾಹ ದಾಟುತ್ತಿದ್ದಾರೆ. ಇನ್ನು ಲೈಫ್ ಜಾಕೆಟ್ ನೀಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ್ದು, ಗ್ರಾಮಸ್ಥರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ತಕ್ಷಣವೇ ಲೈಫ್ ಜಾಕೆಟ್ ನೀಡುವಂತೆ ಟಿವಿ9 ಮೂಲಕ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ