ರಾಜಕೀಯವಾಗಿ ಸೂಕ್ಷ್ಮ ಕಾಲಘಟ್ಟದಲ್ಲಿದ್ದೇವೆ, ಸ್ವಾಮೀಜಿಯವರ ಸಿಎಂ ಯೋಗ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ: ಹೆಚ್ ಕೆ ಪಾಟೀಲ್
ಹೆಚ್ ಕೆ ಪಾಟೀಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಾಯಕರಿಗೆ ಮಾಡಿರುವ ತಾಕೀತಿಗೆ ಅನುಗುಣವಾಗಿ ನಡೆಯುತ್ತಿದ್ದಾರೆ. ಬೇರೆ ಕೆಲವರಾದರೋ ಅವರು ಸಿಎಂ ಇವರು ಕೆಪಿಸಿಸಿ ಅಧ್ಯಕ್ಷ ಅಂತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಪಾಟೀಲ್ ಮಾತ್ರ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿಯ ಹಾಗೆ ಯಾವುದೇ ಹೇಳಿಕೆ ನೀಡದೆ ತಮ್ಮ ಕೆಲಸ ತಾವು ಮಾಡಿಕೊಂಡಿದ್ದಾರೆ
ಗದಗ: ಹಿರಿಯ ರಾಜಕಾರಣಿ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಸಚಿವರಾಗುವ ಹೆಚ್ ಕೆ ಪಾಟೀಲ್ ಅವರಿಗೂ ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ಇದೆಯೇ? ಭೋವಿ ಸಮಾಜದ ಸಿದ್ದರಾಮೇಶ್ವರ ಶ್ರೀಗಳು ಪಾಟೀಲ್ ಅವರಿಗೆ ಯೋಗ ಇದೆ ಎಂದು ಹೇಳಿರುವುದು ಇಂಥದೊಂದು ಪ್ರಶ್ನೆ ಹುಟ್ಟಲು ಕಾರಣವಾಗಿದೆ. ಗದಗನಲ್ಲಿ ಪ್ರತಿಕ್ರಿಯೆ ನೀಡಿದ ಪಾಟೀಲ್ ಅವರು ಸ್ವಾಮಿಗಳ ಇಚ್ಛೆ ಇರಬಹುದು, ಆದರೆ ರಾಜಕಾರಣದಲ್ಲಿ ತಮ್ಮ ನಿಲುವುಗಳ ಬಗ್ಗೆ ಈಗಾಗಲೇ ಹತ್ತಾರು ಬಾರಿ ಹೇಳಿಯಾಗಿದೆ, ರಾಜಕೀಯ ಈಗ ಸೂಕ್ಷ್ಮ ಕಾಲಘಟ್ಟದಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು..
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಹೆಚ್ ಕೆ ಪಾಟೀಲ್ ತವರು ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ: ಗದಗ-ಬೆಟಗೇರಿ ಜನರಿದ ಹಿಡಿಶಾಪ
Latest Videos