Loading video

ಬಸನಗೌಡ ಪಾಟೀಲ್ ಯತ್ನಾಳ್​ರ ಉಚ್ಚಾಟನೆಯ ಬಗ್ಗೆ ನಾನೇನೂ ಹೇಳಲ್ಲ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

Updated on: Apr 03, 2025 | 4:20 PM

ವಕ್ಫ್ ತಿದ್ದುಪಡಿ ಮಸೂದೆಗೆ ಸಂಸತ್ತು ಅನುಮೋದನೆ ನೀಡಿರುವುದನ್ನು ಪ್ರಸ್ತಾಪಿಸಿದಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳದೆ ಪಕ್ಷದ ಹಿರಿಯರ ಮೇಲೆ ಅದನ್ನು ಜಾರಿಸಿದರು. ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಮೊದಲಾದವರು ಪ್ರತಿಕ್ರಿಯೆ ನೀಡುತ್ತಾರೆ, ತಾನು ಮಾತಾಡುವುದು ಸರಿಯಲ್ಲ ಎಂದರು.

ಧಾರವಾಡ, ಏಪ್ರಿಲ್ 3: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಗ್ಗೆ ಮಾತಾಡಲು ಇಷ್ಟಪಡಲಿಲ್ಲ. ಅವರೊಂದಿಗೆ ಪಂಚಮಸಾಲಿ ಸಮಾಜಕ್ಕಾಗಿ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದು ನಿಜ, ಬಿಜೆಪಿಯಿಂದ ಉಚ್ಚಾಟನೆ ಮತ್ತು ಅವರ ಮುಂದಿನ ನಿರ್ಧಾರ ವೈಯಕ್ತಿಕವಾದ ವಿಷಯಗಳು, ಅವರು ತಮ್ಮ ಪಕ್ಷದ ವಿರುದ್ಧ ಅರೋಪ ಮಾಡಿದ್ದರೆ ಪ್ರತಿಕ್ರಿಯೆ ನೀಡಬಹುದು ಎಂದು ಸಚಿವೆ ಹೇಳಿದರು.

ಇದನ್ನೂ ಓದಿ:   ಪರಿಷತ್​ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ನಿಂದನೆ ಪ್ರಕರಣ ಒಂದು ಕೆಟ್ಟ ಘಳಿಗೆ ಎಂದ ಎಮ್ಮೆಲ್ಸಿ ಸಿಟಿ ರವಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ