AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ವಾರ ಭವಿಷ್ಯ; ಗ್ರಹಗಳ ಪ್ರಭಾವ ಮತ್ತು 12 ರಾಶಿಗಳ ಫಲಾಫಲ

Weekly Horoscope: ವಾರ ಭವಿಷ್ಯ; ಗ್ರಹಗಳ ಪ್ರಭಾವ ಮತ್ತು 12 ರಾಶಿಗಳ ಫಲಾಫಲ

ಅಕ್ಷತಾ ವರ್ಕಾಡಿ
|

Updated on: Jun 14, 2026 | 10:16 AM

Share

ಟಿವಿ9 ಡಿಜಿಟಲ್ ವಾಹಿನಿಯ ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 15-21 ಜೂನ್ 2026 ರ ವಾರದ ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಈ ವಾರದಲ್ಲಿ ಪ್ರಮುಖ ಗ್ರಹಗಳಾದ ರವಿ, ಬುಧ ಮತ್ತು ಕುಜರ ಸಂಚಾರ, ಬುಧಾದಿತ್ಯ ಯೋಗದ ರಚನೆ ಮತ್ತು ವಿವಿಧ ರಾಶಿಗಳ ಮೇಲೆ ಅವುಗಳ ಪರಿಣಾಮಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ. ವೃತ್ತಿ, ಆರ್ಥಿಕ ಸ್ಥಿತಿ, ಆರೋಗ್ಯ, ಸಂಬಂಧಗಳು ಮತ್ತು ಪರಿಹಾರಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ.

ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 15 ರಿಂದ ಜೂನ್ 21ರವರೆಗಿನ ದ್ವಾದಶ ರಾಶಿಗಳ ಫಲಾಫಲವನ್ನು ವಿಶ್ಲೇಷಿಸಿದ್ದಾರೆ. ಈ ವಾರದಲ್ಲಿ ಪರಾಭವನಾಮ ಸಂವತ್ಸರ, ಅಧಿಕ ಜೇಷ್ಠ ಮಾಸ ಮತ್ತು ಗ್ರೀಷ್ಮ ಋತು ಇರಲಿದೆ. ಅಮಾವಾಸ್ಯೆ ಸೇರಿದಂತೆ ವಿವಿಧ ತಿಥಿಗಳು ಮತ್ತು ಕದಳಿ ಗೌರಿ ವ್ರತ, ವಿನಾಯಕಿ ಚತುರ್ಥಿ, ಶ್ರುತ ಪಂಚಮಿ, ಅರಣ್ಯ ಗೌರಿ ಆಚರಣೆಗಳು ನಡೆಯಲಿವೆ. ಗ್ರಹಗಳ ಗೋಚಾರದಂತೆ, ಶನಿ ಗ್ರಹ ಮೀನ ರಾಶಿಯಲ್ಲಿ, ಕುಜ ಗ್ರಹ ಮೇಷ ರಾಶಿಯಲ್ಲಿ ಸಂಚರಿಸಲಿದ್ದಾರೆ. ಜೂನ್ 15ರಂದು ರವಿ ಗ್ರಹ ಮಿಥುನ ರಾಶಿಗೆ ಬುಧನೊಂದಿಗೆ ಪ್ರವೇಶಿಸುವುದರಿಂದ ಬುಧಾದಿತ್ಯ ಯೋಗ ಉಂಟಾಗಲಿದೆ. ಜೂನ್ 21ರಂದು ಕುಜ ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಸಂಚರಿಸಲಿದ್ದಾನೆ. ಈ ವಾರದಲ್ಲಿ ತಮ್ಮ ರಾಶಿಗಳಿಗೆ ಅನುಗುಣವಾಗಿ ಮಾರ್ಗದರ್ಶನ ಪಾಲಿಸುವುದು ಸೂಕ್ತ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ.

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More