ಮುಂಬೈ ನವರಾತ್ರಿ ಉತ್ಸವನಲ್ಲಿ ಅಂದದ ಸೀರೆಗಳನ್ನುಟ್ಟು ಭಾಗವಹಿಸುತ್ತಿರುವ ಚೆಂದದ ತಾರೆ ಕಾಜೋಲ್ ಉತ್ಸವದ ಕಳೆ ಹೆಚ್ಚಿಸುತ್ತಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 15, 2021 | 4:34 PM

ದಸರಾ ಹಬ್ಬಕ್ಕೆ ಏನು ಉಡುವುದು? ಸೀರೆಯಾ, ಡಿಸೈನರ್ ಚೂಡಿ ಅಥವಾ ಲೆಹೆಂಗಾ ಅಂತ ಯೋಚನೆಯಾಗುತ್ತಿದೆಯಾ? ಹಾಗಿದ್ದರೆ, ಬಾಲಿವುಡ್ ಸುಪ್ರಸಿದ್ಧ ನಟಿ ಮತ್ತು ಅವರಷ್ಟೇ ಖ್ಯಾತ ನಟ ಅಜಯ ದೇವಗನ್ ಅವರ ಧರ್ಮಪತ್ನಿ ಕಾಜೋಲ್ ದೇವಗನ್ ಅವರ ಇನ್ಸ್ಟಾಗ್ರಾಮ್ ಅಕೌಂಟ್ಗೆ ಲಾಗಿನ್ ಆಗಿ. ಪ್ರತಿವರ್ಷದಂತೆ ಈ ವರ್ಷವೂ ಮುಂಬೈನಲ್ಲಿ ನಡೆಯುತ್ತಿರುವ ನವರಾತ್ರಿ ದುರ್ಗಾ ಪೂಜಾ ಉತ್ಸವನಲ್ಲಿ ಭಾಗವಹಿಸುತ್ತಿರುವ ಕಾಜೋಲ್ ನೋಡುಗರನ್ನು ಮೋಡಿ ಮಾಡುವ ಸೀರೆಗಳಲ್ಲಿ ಉತ್ಸವಕ್ಕೆ ವಿಶೇಷ ಮೆರಗು ನೀಡುತ್ತಿದ್ದಾರೆ. ಕಳೆದ ವರ್ಷ ದಸರಾ ಸಮಯದಲ್ಲಿ ಕೋವಿಡ್-19 ಭೀತಿ […]

ದಸರಾ ಹಬ್ಬಕ್ಕೆ ಏನು ಉಡುವುದು? ಸೀರೆಯಾ, ಡಿಸೈನರ್ ಚೂಡಿ ಅಥವಾ ಲೆಹೆಂಗಾ ಅಂತ ಯೋಚನೆಯಾಗುತ್ತಿದೆಯಾ? ಹಾಗಿದ್ದರೆ, ಬಾಲಿವುಡ್ ಸುಪ್ರಸಿದ್ಧ ನಟಿ ಮತ್ತು ಅವರಷ್ಟೇ ಖ್ಯಾತ ನಟ ಅಜಯ ದೇವಗನ್ ಅವರ ಧರ್ಮಪತ್ನಿ ಕಾಜೋಲ್ ದೇವಗನ್ ಅವರ ಇನ್ಸ್ಟಾಗ್ರಾಮ್ ಅಕೌಂಟ್ಗೆ ಲಾಗಿನ್ ಆಗಿ. ಪ್ರತಿವರ್ಷದಂತೆ ಈ ವರ್ಷವೂ ಮುಂಬೈನಲ್ಲಿ ನಡೆಯುತ್ತಿರುವ ನವರಾತ್ರಿ ದುರ್ಗಾ ಪೂಜಾ ಉತ್ಸವನಲ್ಲಿ ಭಾಗವಹಿಸುತ್ತಿರುವ ಕಾಜೋಲ್ ನೋಡುಗರನ್ನು ಮೋಡಿ ಮಾಡುವ ಸೀರೆಗಳಲ್ಲಿ ಉತ್ಸವಕ್ಕೆ ವಿಶೇಷ ಮೆರಗು ನೀಡುತ್ತಿದ್ದಾರೆ. ಕಳೆದ ವರ್ಷ ದಸರಾ ಸಮಯದಲ್ಲಿ ಕೋವಿಡ್-19 ಭೀತಿ ಹೆಚ್ಚಾಗಿದ್ದರಿಂದ ಕಾಜೋಲ್ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿರಲಿಲ್ಲ. ಅವರು ಉಡುತ್ತಿರುವ ಸೀರೆಗಳು ನಿಮಗೆ ಪ್ರೇರಣೆ ನೀಡುವುದಲ್ಲಿ ಸಂಶಯವಿಲ್ಲ.

‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾನಲ್ಲಿ ತನ್ನ ಶ್ರೀಮಂತ ಪ್ರತಿಭೆಯನ್ನು ಅನಾವರಣಗೊಳಿಸಿ ಮನೆಮಾತಾದ ಕಾಜೋಲ್ ಎದೆಯಲ್ಲಿ ಕಿಚ್ಚು ಹೊತ್ತಿಸುವ ಸುಂದರಿಯಲ್ಲದಿದ್ದರೂ, ಅಪರೂಪವೆನಿಸುವ ಆಕರ್ಷಣೆ ಅವರ ಸೌಂದರ್ಯದಲ್ಲ್ಲಿದೆ. ಆವರ ಮೈಮಾಟಕ್ಕೆ ಸೀರೆ ಬಹಳ ಚೆನ್ನಾಗಿ ಒಪ್ಪುತ್ತದೆ.

ಕಾಜೋಲ್ ಮೂಲತಃ ಪಶ್ಚಿಮ ಬಂಗಾಳದವರು. ಬಂಗಾಳಿಗಳಿಗೆ ದುರ್ಗಾ ಪೂಜೆ ಬಹಳ ದೊಡ್ಡ ಹಬ್ಬ. ಕಾಜೋಲ್ ಅವರ ಬಹಳಷ್ಟು ಸಂಬಂಧಿಕರು ಮುಂಬೈನಲ್ಲಿ ವಾಸವಾಗಿದ್ದಾರೆ ಹಾಗೂ ಅವರೆಲ್ಲ ನವರಾತ್ರಿ ಉತ್ಸವನಲ್ಲಿ ತಪ್ಪದೆ ಪಾಲ್ಗೊಳ್ಳುತ್ತಾರೆ.

ಪೂಜೆಯ 7ನೇ ದಿನದಂದು (ಸಪ್ತಮಿ) ಕಾಜೋಲ್ ತನ್ನ ಚಿಕ್ಕಂಪ್ಪಂದಿರನ್ನು (ಮುಖರ್ಜಿ ಸಹೋದರು) ಕಂಡು ಭಾವುಕರಾದರು. ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರು ವಿಡಿಯೋವನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ. ಬಹಳ ದಿನಗಳ ನಂತರ ಹಿರಿಯರನ್ನು ಭೇಟಿಯಾಗಿದ್ದರಿಂದ ಭಾವನೆಗಳನ್ನು ಆದುಮಿಟ್ಟುಕೊಳ್ಳಲಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಕಾಜೋಲ್ ಆವರ ಇಮೇಜ್ ಮತ್ತು ವಿಡಿಯೋಗಳನ್ನು ನೋಡಿ ಅಭಿಮಾನಿಗಳು ಅವಾಕ್ಕಾಗಿದ್ದಾರೆ. ಒಬ್ಬ ಅಭಿಮಾನಿ, ‘ಬಹಳ ಸುಂದರವಾಗಿ ಕಾಣುತ್ತಿದ್ದೀರಿ, ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ನಂಬಲಸದಳವಾದದ್ದು,’ ಎಂದು ಕಾಮೆಂಟ್ ಮಾಡಿದ್ದಾನೆ.

ಮತ್ತೊಬ್ಬ ಫ್ಯಾನ್, ‘ಹಸಿರು ಸೀರೆಯಲ್ಲಿ ನಿಮ್ಮನ್ನು ನೋಡಿ ವಶೀಕರಣಕ್ಕೊಳಗಾಗಿದ್ದೇನೆ,’ ಅಂತ ಬರೆದುಕೊಂಡಿದ್ದಾನೆ.

ಇದನ್ನೂ ಓದಿ:   ‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ