ಬಿಗ್​ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ

Updated on: Jan 26, 2024 | 2:52 PM

Bigg Boss: ತುಕಾಲಿ ಸಂತೋಷ್ ಆಸೆಯನ್ನು ಬಿಗ್​ಬಾಸ್ ಈಡೇರಿಸಿದ್ದು, ಕೆಲವು ಸಮಯಕ್ಕೆ ಅವರನ್ನು ಬಿಗ್​ಬಾಸ್ ಮನೆಯ ರಾಜನನ್ನಾಗಿ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೋರಿಕೆಯೂ ಈಡೇರಿದೆ. ವರ್ತೂರು ಸಂತು ಆಸೆ ಈಡೇರುತ್ತಾ?

ಬಿಗ್​ಬಾಸ್ (BiggBoss) ಫಿನಾಲೆ ನಡೆಯಲು ಇನ್ನೆರೆಡು ದಿನಗಳಷ್ಟೆ ಬಾಕಿ ಇವೆ. ಕಳೆದ ನೂರು ದಿನದಿಂದ ಟಾಸ್ಕ್, ಜಗಳ ಇನ್ನಿತರೆಗಳಲ್ಲಿ ಮುಳುಗಿ ಹೋಗಿದ್ದ ಮನೆ ಮಂದಿ ಈಗ ಕೊನೆಯ ದಿನಗಳಲ್ಲಿ ಜಗಳಗಳನ್ನೆಲ್ಲ ಮರೆತು ಆರಾಮದಿಂದ ಕಾಲ ಕಳೆಯುತ್ತಿದ್ದಾರೆ. ಬಿಗ್​ಬಾಸ್ ಮುಂದೆ ಸ್ಪರ್ಧಿಗಳು ತಮ್ಮ ಆಸೆಯನ್ನು ಹೇಳಿಕೊಂಡಿದ್ದು ಅವುಗಳನ್ನು ನೆರವೇರಿಸುತ್ತಿದ್ದಾರೆ ಬಿಗ್​ಬಾಸ್. ತುಕಾಲಿ, ತಾನು ಸೂಟು-ಬೂಟು ಹಾಕಿಕೊಂಡು ರಾಜನಂತೆ ಮನೆಯಲ್ಲಿ ಓಡಾಡಬೇಕು, ಮನೆಯ ಸದಸ್ಯರು ಕೆಲ ಹೊತ್ತಿಗಾದರು ನಾನು ಹೇಳಿದಂತೆ ಕೇಳಬೇಕು ಎಂದು ಕೋರಿದ್ದರು. ಅಂತೆಯೇ ತುಕಾಲಿ ಇದೀಗ ಮನೆಯ ರಾಜನಾಗಿದ್ದಾರೆ. ಪ್ರತಾಪ್​ ರ ಅಚ್ಚು ಮೆಚ್ಚಿನ ಡ್ರೋನ್ ಅನ್ನು ಮನೆಯೊಳಗೆ ಕಳಿಸಿದ್ದಾರೆ ಬಿಗ್​ಬಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More