Jog Falls: ಜೋಗ ಜಲಪಾತದ ವೈಭವ ಕಣ್ತುಂಬಿಕೊಳ್ಳಲು ಜನ ಸಾಗರ
ಹಾಲ್ನೊರೆಯಂತೆ ಜೋಗ ಜಲಪಾತ ಭೋರ್ಗರೆಯುತ್ತಿದೆ. ಜೋಗದ ವೈಯ್ಯಾರ ಕಣ್ತುಂಬಿಕೊಂಡು ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ.
ಮುಂಗಾರು ಮಳೆ ಆರಂಭವಾಗಿದ್ದು ಶಿವಮೊಗ್ಗ ಸುತ್ತಮುತ್ತ ಭರ್ಜರಿ ಮಳೆ ಬೀಳುತ್ತಿದೆ. ಈ ಹಿನ್ನೆಲೆ ವಿಶ್ವವಿಖ್ಯಾತ ಜೋಗ ಜಲಪಾತ (Jog Falls) ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಮಂಜಿನ ಮರೆಯಲಿ.. ಚುಮುಚುಮು ಮಳೆಯ ನಡುವೆ ಹಾಲ್ನೊರೆಯಂತೆ ಜೋಗ ಜಲಪಾತ ಭೋರ್ಗರೆಯುತ್ತಿದೆ. ಜೋಗದ ವೈಯ್ಯಾರ ಕಣ್ತುಂಬಿಕೊಂಡು ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ. ಮಲೆನಾಡು ಭಾಗದಲ್ಲಿ ಭಾರಿ ಮಳೆ ಆಗ್ತಿರೋ ಹಿನ್ನಲೆಯಲ್ಲಿ ಮೋಡದ ನಡುವೆ ಧುಮ್ಮಿಕ್ಕುತ್ತಿರೋ ಜೋಗವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.
ಉತ್ತರ ಕನ್ನಡ ಜಿಲ್ಲೆ ಮತ್ತು ಸಾಗರ ತಾಲೂಕಿನಲ್ಲಿ ಮಳೆ ಜೋರಾಗಿದೆ. ಈ ಹಿನ್ನೆಲೆ ಜೋಗ ಜಲಪಾತ ಕಳೆಗಟ್ಟಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳು ಭೊರ್ಗರೆಯುತ್ತ ಧುಮ್ಮಕ್ಕುತ್ತಿವೆ. ಇದನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಪ್ರವಾಸಿಗರು ದಂಡೇ ಹರಿದು ಬರುತ್ತಿದೆ.