‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
ದುನಿಯಾ ವಿಜಯ್ ಪುತ್ರ ಸೇರಿದಂತೆ ಆತನ ಕೆಲವು ಗೆಳೆಯರು ಯುವಕನೊಬ್ಬನನ್ನು ಸಫಾರಿ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ, ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ದೂರು ಸಹ ದಾಖಲಾಗಿತ್ತು. ಇದೀಗ ದುನಿಯಾ ವಿಜಯ್ ಪುತ್ರನಿಗೆ ನಿರೀಕ್ಷಣಾ ಜಾಮೀನು ದೊರೆತಿದೆ. ತಮ್ಮ ‘ಸಿಟಿ ಲೈಟ್ಸ್’ ಸಿನಿಮಾ ಪ್ರಚಾರದಲ್ಲಿರುವ ದುನಿಯಾ ವಿಜಯ್ ಅವರಿಗೆ ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದು, ‘ಮೈಮೇಲೆ ಪ್ರಜ್ಞೆ ಇರಬೇಕು, ನಾನು ಅವನಿಗೆ ಬುದ್ಧಿ ಹೇಳಿದ್ದೀನಿ, ನ್ಯಾಯಾಲಯ ಏನು ಆದೇಶ ಮಾಡುತ್ತದೆಯೇ ಅದನ್ನು ಸ್ವೀಕರಿಸುತ್ತೀವಿ’ ಎಂದಿದ್ದಾರೆ.
ದುನಿಯಾ ವಿಜಯ್ (Duniya Vijay) ಪುತ್ರನ ವಿರುದ್ಧ ಹಲ್ಲೆ ಮತ್ತು ಅಪಹರಣ ಪ್ರಕರಣ ದಾಖಲಾಗಿದೆ. ತನ್ನ ಸಹಪಾಠಿಯೊಬ್ಬಾತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿರುವ ಆರೋಪ ದುನಿಯಾ ವಿಜಿ ಪುತ್ರ ಸಾಮ್ರಾಟ್ ಮೇಲಿದೆ. ತಮ್ಮ ಕಾರನ್ನು ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ದುನಿಯಾ ವಿಜಯ್ ಪುತ್ರ ಸೇರಿದಂತೆ ಆತನ ಕೆಲವು ಗೆಳೆಯರು ಯುವಕನೊಬ್ಬನನ್ನು ಸಫಾರಿ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ, ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ದೂರು ಸಹ ದಾಖಲಾಗಿತ್ತು. ಇದೀಗ ದುನಿಯಾ ವಿಜಯ್ ಪುತ್ರನಿಗೆ ನಿರೀಕ್ಷಣಾ ಜಾಮೀನು ದೊರೆತಿದೆ. ತಮ್ಮ ‘ಸಿಟಿ ಲೈಟ್ಸ್’ ಸಿನಿಮಾ ಪ್ರಚಾರದಲ್ಲಿರುವ ದುನಿಯಾ ವಿಜಯ್ ಅವರಿಗೆ ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದು, ‘ಮೈಮೇಲೆ ಪ್ರಜ್ಞೆ ಇರಬೇಕು, ನಾನು ಅವನಿಗೆ ಬುದ್ಧಿ ಹೇಳಿದ್ದೀನಿ, ನ್ಯಾಯಾಲಯ ಏನು ಆದೇಶ ಮಾಡುತ್ತದೆಯೇ ಅದನ್ನು ಸ್ವೀಕರಿಸುತ್ತೀವಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

