AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುನಿಯಾ ವಿಜಯ್ ಜೊತೆ ವಿಚ್ಛೇದನ ಪಡೆದ ಬಳಿಕ ನಾಗರತ್ನ ಅಚ್ಚರಿಯ ಬರಹ

ಖ್ಯಾತ ನಟ ದುನಿಯಾ ವಿಜಯ್ ಅವರ ಪತ್ನಿ ನಾಗರತ್ನ ಈ ದೀರ್ಘ ಬರಹ ಹಂಚಿಕೊಂಡಿದ್ದಾರೆ. ತಾವು ಅನುಭವಿಸಿದ ನೋವುಗಳ ಬಗ್ಗೆ ಅವರು ಬರೆದುಕೊಂಡಿದ್ದಾರೆ. ವಿಚ್ಛೇದನ ಪಡೆದ ಬಳಿಕ ಅವರು ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ. ಸರಿಯಾದ ಸಮಯದಲ್ಲಿ ಇನ್ನಷ್ಟು ವಿಷಯ ಹಂಚಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ದುನಿಯಾ ವಿಜಯ್ ಜೊತೆ ವಿಚ್ಛೇದನ ಪಡೆದ ಬಳಿಕ ನಾಗರತ್ನ ಅಚ್ಚರಿಯ ಬರಹ
Duniya Vijay, Nagarathna
ಮದನ್​ ಕುಮಾರ್​
|

Updated on: Sep 03, 2026 | 10:11 PM

Share

ನಟ ದುನಿಯಾ ವಿಜಯ್ ಹಾಗೂ ನಾಗರತ್ನ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ಡಿವೋರ್ಸ್ ಪಡೆದ ಬಳಿಕ ದುನಿಯಾ ವಿಜಯ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ನಾಗರತ್ನ ಅವರು ಕೂಡ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ವಿಚ್ಛೇದನಕ್ಕೆ ಕಾರಣ ಏನು? ಮುಂದಿನ ನಡೆ ಯಾವ ರೀತಿ ಇರಲಿದೆ ಎಂಬುದನ್ನು ಅವರು ಈ ಮೂಲಕ ತಿಳಿಸಿದ್ದಾರೆ. ನಾಗರತ್ನ ಅವರು ಹಂಚಿಕೊಂಡಿರುವ ಬರಹ ಈ ಕೆಳಗಿನಂತಿದೆ..

‘ಎಲ್ಲಾ ಪ್ರೀತಿಯ ಜನತೆಗೆ ಹಾಗೂ ಮಾಧ್ಯಮದವರಿಗೆ ನನ್ನ ನಮಸ್ಕಾರಗಳು. ಇಷ್ಟು ವರ್ಷಗಳ ಕಾಲ ನಾನು ನನ್ನ ಮಕ್ಕಳಿಗಾಗಿ ಹಾಗೂ ಅವರ ಭವಿಷ್ಯದ ಒಳಿತಿಗಾಗಿ ಎಲ್ಲವನ್ನೂ ಸಹಿಸಿಕೊಂಡು, ಈ ಮದುವೆಯನ್ನು ಉಳಿಸಿಕೊಳ್ಳುವ ಆಶಯದಿಂದ ವಿಚ್ಛೇದನವನ್ನು ವಿರೋಧಿಸುತ್ತಲೇ ಬಂದೆ. ಅದು ಸುಲಭವಾಗಿರಲಿಲ್ಲ. ಆದರೆ ಇಂದು, ನ್ಯಾಯಾಲಯವು ಅಂತಿಮವಾಗಿ ವಿಚ್ಛೇದನವನ್ನು ಮಂಜೂರು ಮಾಡಿದೆ.’

‘ಈ ದೀರ್ಘ ಹೋರಾಟದ ಉದ್ದೇಶ, ನಮ್ಮ ಮದುವೆಯ ಹೊರಗೆ ಆಯ್ಕೆ ಮಾಡಿಕೊಂಡ ಅನೈತಿಕ ಸಂಬಂಧವನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವುದೇ ಆಗಿದ್ದರೆ, ಕೊನೆಗೂ ಆ ಉದ್ದೇಶ ಈಡೇರಿದೆ. ನಾನು ಅನುಭವಿಸಿದ NARCISSISTIC ABUSE ಹಾಗೂ ಅದರ ನೋವು ಮತ್ತು ಅದರಿಂದಾದ ಎಲ್ಲಾ ಪರಿಣಾಮಗಳನ್ನು ಸಹಿಸಿಕೊಂಡಿದ್ದೇನೆ.’

‘ಹೊರಗಿನಿಂದ ಯಾರಿಗೂ ಕಾಣದಂತಹ ಆಳವಾದ ಮಾನಸಿಕ ಹಾಗೂ ಭಾವನಾತ್ಮಕ ನೋವನ್ನು ಒಳಗೇ ಇಟ್ಟುಕೊಂಡು ಬದುಕುವುದು ಹೇಗಿರುತ್ತದೆ ಎಂಬುದು ನನಗೆ ಮಾತ್ರ ಗೊತ್ತು. ನನ್ನ ಅನುಭವವನ್ನು ಒಂದು ದಿನ ಖಂಡಿತವಾಗಿಯೂ ಹಂಚಿಕೊಳ್ಳಲು ಬಯಸುತ್ತೇನೆ. ಯಾರ ಮೇಲೂ ಆರೋಪ ಹೊರಿಸುವುದಕ್ಕಾಗಲಿ ಅಲ್ಲ. ಇಂತಹ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ತಾವು ಒಂಟಿಯಲ್ಲ ಎಂಬ ಅರಿವು ಮೂಡಿಸುವುದೇ ನನ್ನ ಉದ್ದೇಶ.’

Nagarathna Reaction

Nagarathna Reaction

‘ನನ್ನ ಮಕ್ಕಳ ಭವಿಷ್ಯವೇ ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿತ್ತು. ಇಂದಿಗೂ ಅದೇ ನನ್ನ ಮೊದಲ ಆದ್ಯತೆ. ಏಕೆಂದರೆ ಅವರ ಜೀವನದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ, ನನ್ನ ವೈಯಕ್ತಿಕ ನೋವುಗಳು ಅದರ ಮೇಲೆ ನೆರಳು ಬೀಳುವುದು ನನಗೆ ಇಷ್ಟವಿಲ್ಲ. ಆದ್ದರಿಂದ ಇಂದು ನಾನು ಮೌನವಾಗಿರಲು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲದಕ್ಕೂ ಒಂದು ಸರಿಯಾದ ಸಮಯವಿದೆ ಎಂಬ ಕಾರಣಕ್ಕೆ. ಒಂದು ದಿನ ನನ್ನ ಅನುಭವವನ್ನು ನನ್ನದೇ ಮಾತುಗಳಲ್ಲಿ ಹಂಚಿಕೊಳ್ಳುತ್ತೇನೆ.’

ಇದನ್ನೂ ಓದಿ: ವಿಚ್ಛೇದನದ ಬೆನ್ನಲ್ಲೆ ಅಭಿಮಾನಿಗಳಲ್ಲಿ ದುನಿಯಾ ವಿಜಯ್ ಮನವಿ

‘ನನ್ನ ಮಕ್ಕಳು ಯಾವಾಗಲೂ ನನ್ನ ಶಕ್ತಿಯಾಗಿ ನನ್ನ ಜೊತೆ ನಿಂತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೂವರು ಮಕ್ಕಳ ಮೇಲಿದ್ದರೆ, ನನಗೆ ಅಷ್ಟೇ ಸಾಕು. ವಿಜಯ್ ಕುಮಾರ್ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ. ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ.’

NAGARATHNA

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us