ಇ-ಅಸ್ತಿ 2.0 ಆಸ್ತಿ ದಾಖಲೆ ವ್ಯವಸ್ಥೆ ಲೋಕಾರ್ಪಣೆ: ನೀವಿರುವಲ್ಲಿಂದಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ

Edited By:

Updated on: Sep 23, 2026 | 9:15 AM

ಆಸ್ತಿ ದಾಖಲೆಗಳ ಡಿಜಿಟಲೀಕರಣ ಮತ್ತು ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ‘ಇ-ಅಸ್ತಿ 2.0’ ಪ್ರಾರಂಭಿಸಲಾಗಿದೆ. ಈ ವ್ಯವಸ್ಥೆಯು ಆಸ್ತಿ ಮಾಲೀಕರಿಗೆ ಖಾತಾ ಪರಿವರ್ತನೆ, ದಾಖಲೆಗಳ ಅಪ್ಲೋಡ್ ಮತ್ತು ಟ್ರ್ಯಾಕಿಂಗ್ ಅನ್ನು ಸರಳಗೊಳಿಸುತ್ತದೆ. ಭೂಗಳ್ಳರ ಹಾವಳಿಯನ್ನು ತಡೆದು, ಪಾರದರ್ಶಕತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರು ನಗರದಲ್ಲಿ ಆಸ್ತಿ ಮಾಲೀಕರಿಗೆ ತಮ್ಮ ದಾಖಲೆಗಳನ್ನು ಸರಳಗೊಳಿಸಲು ಮತ್ತು ಭದ್ರಪಡಿಸಿಕೊಳ್ಳಲು ‘ಇ-ಅಸ್ತಿ 2.0’ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣೇಭೈರೇಗೌಡರು ಈ ನವೀಕೃತ ವ್ಯವಸ್ಥೆಯನ್ನು ಬಿಡುಗಡೆ ಮಾಡಿದ್ದಾರೆ. ಹಿಂದೆ ಇ-ಖಾತಾ ಪದ್ಧತಿ ಜಾರಿಯಲ್ಲಿದ್ದು, ‘ಇ-ಅಸ್ತಿ 1.0’ ಅನ್ನು ಈಗ ಮತ್ತಷ್ಟು ಸುಧಾರಿಸಿ ‘2.0’ ಆವೃತ್ತಿಯನ್ನು ಪರಿಚಯಿಸಲಾಗಿದೆ. ಇದರ ಮುಖ್ಯ ಉದ್ದೇಶ ಆಸ್ತಿ ದಾಖಲೆಗಳನ್ನು ಕಂಪ್ಯೂಟರ್‌ಕರಣಗೊಳಿಸುವುದು, ಪಾರದರ್ಶಕತೆ ಹೆಚ್ಚಿಸುವುದು ಮತ್ತು ನಾಗರಿಕ ಸ್ನೇಹಿಯಾಗಿ ಮಾಡುವುದು. ಭೂಗಳ್ಳರ ಹಾವಳಿಯನ್ನು ತಡೆಯುವುದು ಈ ವ್ಯವಸ್ಥೆಯ ಪ್ರಮುಖ ಗುರಿಯಾಗಿದೆ.

ಈ ಹೊಸ ಆಪ್ ಮೂಲಕ ಆಸ್ತಿ ಮಾಲೀಕರು ತಮ್ಮ ಸೇಲ್ ಡೀಡ್, ಖಾತಾ ಸಂಖ್ಯೆ, ಈಸಿ ಮತ್ತು ಪಾಣಿಯಂತಹ ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಬಹುದು. ದಾಖಲೆಗಳ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಮತ್ತು ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಯ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇದು ನೆರವಾಗುತ್ತದೆ. ಬಿಡಬ್ಲ್ಯೂಎಸ್ಎಸ್‌ಬಿ, ಬೆಸ್ಕಾಂ ಮತ್ತು ಕಾವೇರಿ ತಂತ್ರಾಂಶಗಳೊಂದಿಗೆ ಇದರ ಏಕೀಕರಣದಿಂದಾಗಿ ಆಸ್ತಿ ಸಂಬಂಧಿತ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಬಹುದು. ಸುಮಾರು 11 ಲಕ್ಷ ಜನರು ಈಗಾಗಲೇ ಇದರ ಪ್ರಯೋಜನ ಪಡೆದಿದ್ದಾರೆ. ಇ ಖಾತಾ ಪಡೆಯಲು ಏನು ಮಾಡಬೇಕು ಎಂಬ ವಿವರ ಈ ವಿಡಿಯೋದಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us