ಬೆಂಗಳೂರು ಗ್ರಾಮಾಂತರ ಕ್ಷೇತ್ರ; ರಾಷ್ಟ್ರ ರಾಜಕಾರಣದಲ್ಲಿ ನಂಗೆ ಆಸಕ್ತಿಯಿಲ್ಲ, ಡಾ ಮಂಜುನಾಥ್ ಮನವೊಲಿಕೆ ಕೆಲಸ ನಡೆದಿದೆ: ಸಿಪಿ ಯೋಗೇಶ್ವರ

ಬೆಂಗಳೂರು ಗ್ರಾಮಾಂತರ ಕ್ಷೇತ್ರ; ರಾಷ್ಟ್ರ ರಾಜಕಾರಣದಲ್ಲಿ ನಂಗೆ ಆಸಕ್ತಿಯಿಲ್ಲ, ಡಾ ಮಂಜುನಾಥ್ ಮನವೊಲಿಕೆ ಕೆಲಸ ನಡೆದಿದೆ: ಸಿಪಿ ಯೋಗೇಶ್ವರ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 06, 2024 | 6:09 PM

ನಿನ್ನೆ ರಾಮನಗರದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಭೆಯೊಂದನ್ನು ಕರೆದಿದ್ದರು. ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಿತು ಮತ್ತು ಡಾ ಮಂಜುನಾಥ ಅವರ ಹೆಸರು ಸಹ ಚರ್ಚೆಗೆ ಬಂತು ಎಂದು ಯೋಗೇಶ್ವರ ಹೇಳಿದರು.

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ (CP Yogeshwar) ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ (Bengaluru Rural constituency) ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ (Dr CN Manjunath) ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು. ನಿನ್ನೆ ರಾಮನಗರದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಭೆಯೊಂದನ್ನು ಕರೆದಿದ್ದರು. ಸಭೆಯಲ್ಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಿತು ಮತ್ತು ಡಾ ಮಂಜುನಾಥ ಅವರ ಹೆಸರು ಸಹ ಚರ್ಚೆಗೆ ಬಂತು ಎಂದು ಯೋಗೇಶ್ವರ ಹೇಳಿದರು.

ಮುಂಜುನಾಥ ಅವರ ಮನವೊಲಿಸಲು ತಾನೂ ಸಹ ಅವರ ಮನೆಗೆ ಹೋಗಿದ್ದಾಗಿ ಹೇಳಿದ ಅವರು ತನ್ನ ಹೆಸರು ಕೂಡ ಕೇಳಿಬರುತ್ತಿರುವ ಬಗ್ಗೆ ಅರಿವಿದ್ದರೂ ತನಗೆ ರಾಜ್ಯ ರಾಜಕಾರಣದಲ್ಲಿ ಮಾತ್ರ ಆಸಕ್ತಿ ಎಂದರು. ಯೋಗೇಶ್ವರ್ ಹೇಳುವ ಪ್ರಕಾರ ಹಿಂದಿನ ಬಿಜೆಪಿ ಸರಕಾರದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ ಸಿಎನ್ ಅಶ್ವಥ್ ನಾರಾಯಣ ಇಲ್ಲವೇ ವಿರೋಧ ಪಕ್ಷದ ನಾಯಕ ಆರ್ ಅಶೋಕ ಉತ್ತಮ ಅಭ್ಯರ್ಥಿಗಳೆನಿಸಿಕೊಳ್ಳುತ್ತಾರೆ ಮತ್ತು ಯಾರೇ ಸ್ಪರ್ಧಿಸಿದರೂ ಎನ್ ಡಿಎ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭೆ ಚುನಾವಣೆ: ಮೈತ್ರಿ ಅಭ್ಯರ್ಥಿಯಾಗಿ ಡಾ ಮಂಜುನಾಥ್ ಸ್ಪರ್ಧೆ ಬಹುತೇಕ ಖಚಿತ