ಬೆಂಗಳೂರಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಕನ್ನಡ-ಕನ್ನಡೇತರ ಹಣೆಪಟ್ಟಿ ಕಟ್ಟಲಾಗುತ್ತಿದೆ: ಪ್ರತಾಪ್ ಸಿಂಹ

Updated on: Apr 22, 2025 | 3:48 PM

ರಾಷ್ಟ್ರೀಯ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ನ್ಯೂಸ್ ಚ್ಯಾನೆಲ್ ಗಳು ಕರ್ನಾಟಕ ಮತ್ತು ಬೆಂಗಳೂರಲ್ಲಿ ನಡೆಯುವ ಘಟನೆಗಳಿಗೆ ಕನ್ನಡಿಗರ ದಬ್ಬಾಳಿಕೆ, ಕನ್ನಡ ಮಾತಾಡಲು ಬಾರದ ಕಾರಣ ಅವಾಚ್ಯ ಪದಗಳಿಂದ ನಿಂದನೆ ಅಂತ ಕನ್ನಡಿಗರನ್ನು ನಕಾರಾತ್ಮಕ ಧೋರಣೆಯಿಂದ ತೋರಿಸುವ ಪ್ರಯತ್ನ ಮಾಡುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮೈಸೂರು, ಏಪ್ರಿಲ್ 22: ಬೆಂಗಳೂರಲ್ಲಿ ನಡೆಯುವ ರೋಡ್ ರೇಜ್ ಪ್ರಕರಣಗಳು, ಕ್ಯಾಬ್ ಚಾಲಕ ಮತ್ತು ಗ್ರಾಹಕರ ನಡೆವ ವಾಗ್ವಾದಗಳು ಮತ್ತು ಇನ್ನಿತರ ಜಗಳಗಳಿಗೆ ಕನ್ನಡ ಮತ್ತು ಕನ್ನಡೇತರ ಹಣೆಪಟ್ಟಿ ಕಟ್ಟೋದು ರಾಷ್ಟ್ರೀಯ ಮಾಧ್ಯಮಗಳಿಗೆ ಅಭ್ಯಾಸವಾಗಿ ಹೋಗಿದೆ, ನಿನ್ನೆ ನಡೆದ ಪ್ರಕರಣವನ್ನು ಅವರು ಹಾಗೆಯೇ ಬಿಂಬಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ವಾಯುಪಡೆಯ ಅಧಿಕಾರಿ ಶಿಲಾದಿತ್ಯ ಬೋಸ್ ಒಬ್ಬ ಅಮಾಯಕ ಕನ್ನಡಿಗನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ತಾನು ಕನ್ನಡದಲ್ಲಿ ಮಾತಾಡದೆ ಇದ್ದುದಕ್ಕೆ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಕನ್ನಡ-ಕನ್ನಡೇತರ ಅಂಶವನ್ನು ಮುನ್ನೆಲೆಗೆ ತಂದು ನಡೆದ ಸನ್ನಿವೇಶವನ್ನೇ ಬದಲಿಸಿದ್ದಾರೆ ಎಂದು ಪ್ರತಾಪ್ ಹೇಳಿದರು.

ಇದನ್ನೂ ಓದಿ:  ಬೆಂಗಳೂರು ರೋಡ್​ರೇಜ್, ಹಲ್ಲೆ ಪ್ರಕರಣ: ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ