ಬೆಂಗಳೂರಲ್ಲಿ ನಿರ್ಮಾಣವಾಗಲಿರುವ ಟನ್ನೆಲ್ ರಸ್ತೆಯಲ್ಲಿ ಟೋಲ್ ಪ್ಲಾಜಾ ಸ್ಥಾಪಿಸುವುದು ಅನಿವಾರ್ಯ: ಶಿವಕುಮಾರ್
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಅವರು ಬೆಂಗಳೂರಿನ ಮಹತ್ವಾಕಾಂಕ್ಷಿ ಯೋಜನಗಳಲ್ಲಿ ಒಂದಾಗಿರುವ ಟನ್ನೆಲ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತಾಡಿದ್ದಾರೆ. ವಿಷಯವನ್ನು ಶಿವಕುಮಾರ್ಗೆ ಹೇಳಿದಾಗ, ಬಹಳ ಸಂತೋಷ, ಕುಮಾರಸ್ವಾಮಿಯವರ ಸಲಹೆಗಳನ್ನು ಮುಕ್ತವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.
ದೆಹಲಿ, ಜುಲೈ 9: ನಿನ್ನೆಯಿಂದ ದೆಹಲಿಯಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದರು. ಕೇವಲ ತನ್ನ ಸುಪರ್ದಿಯಲ್ಲಿ ಬರುವ ಇಲಾಖೆಗಳಿಗೆ ಸಂಬಂಧಿಸಿದ ಪ್ರಸ್ನೆಗಳಿಗೆ ಉತ್ತರಿಸುವೆ ಎಂದು ಹೇಳಿದ ಅವರು ಬೆಂಗಳೂರಲ್ಲಿ ಟನೆಲ್ ರಸ್ತೆಗಾಗಿ ಜಾಗತಿಕ ಟೆಂಡರ್ ಕರೆಯಲಾಗಿದ್ದು ಕಾಮಗಾರಿ (tunnel road works) ಆದಷ್ಟು ಬೇಗ ಶುರುವಾಗಲಿದೆ ಎಂದರು. ಟನೆಲ್ ರಸ್ತೆಯಲ್ಲಿ ಟೋಲ್ ಪ್ಲಾಜಾಗಳನ್ನು ನಿರ್ಮಿಸುವುದು ಅನಿವಾರ್ಯ ಅವಿಲ್ಲದೆ ಟನೆಲ್ ರಸ್ತೆಯ ಉಸ್ತುವಾರಿ ಕಷ್ಟ ಎಂದು ಸಚಿವೆ ಹೇಳಿದರು. ಮೈಸೂರು ರಸ್ತೆ, ನೈಸ್ ರಸ್ತೆ ಯಲ್ಲಿ ಟೋಲ್ ಇವೆ, ಏರ್ಪೋರ್ಟ್ ನಲ್ಲಿದೆ, ಎಲ್ಲ ಕಡೆ ಟೋಲ್ ಪ್ಲಾಜಾಗಳಿರುವಾಗ ಬೆಂಗಳೂರು ಟನೆಲ್ ರಸ್ತೆಗೆ ಯಾಕೆ ಬೇಡ? ಅವಸರದಲ್ಲಿರುವನು ಟೋಲ್ ಶುಲ್ಕ ಪಾವತಿಸಿ ರಸ್ತೆ ಬಳಸುತ್ತಾನೆ ಎಂದು ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ರಾಮನಗರದ ಎಲ್ಲ ಶಾಸಕರಂತೆ ನಾನೂ ಸಹ ಶಿವಕುಮಾರ್ ಸಿಎಂ ಆಗುವುದನ್ನು ಬಯಸುತ್ತೇನೆ: ಯೋಗೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ