Operation Sindoor: ಉಗ್ರರ ನೆಲೆಗಳ ಮೇಲೆ ಭಾರತ ದಾಳಿ, ಬೆಳಗಾವಿಯಲ್ಲಿ ಸಂಭ್ರಮ ಆಚರಿಸಿದ ಮಾಜಿ ಸೈನಿಕರು
ಸಂಭ್ರಮ ಆಚರಿಸುತ್ತಿರುವ ಸೈನಿಕರಲ್ಲಿ ಸೇನೆಯಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಮಹಿಳೆಯರೂ ಇದ್ದಾರೆ. ಪಾಪಿಗಳು ಅಮಾಯಕ ಮಹಿಳೆಯರ ಸಿಂಧೂರವನ್ನು ಅಳಿಸಿಹಾಕಿದ್ದಾರೆ, ಪತಿಯನ್ನು ಕಳೆದುಕೊಂಡು ಪರಿತಪಿಸುತ್ತಿರುವ ಆ ಮಹಿಳೆಯರಿಗೆ ಆಪರೇಷನ್ ಸಿಂಧೂರ್ ಕೊಂಚ ನಿರಾಳತೆಯನ್ನು ಒದಗಿಸಿದೆ, ಸೇನೆಯಿಂದ ತಮಗೆ ಯುದ್ಧಕ್ಕೆ ಕರೆ ಬಂದರೆ ಹೋಗಲು ತುದಿಗಾಲಲ್ಲಿ ನಿಂತಿದ್ದೇವೆ ಎಂದು ಒಬ್ಬ ಮಹಿಳಾ ಸೈನಿಕರು ಹೇಳುತ್ತಾರೆ.
ಬೆಳಗಾವಿ, ಮೇ 7: ಪಾಕಿಸ್ತಾನ ಮತ್ತು ಅದು ಸಲಹುತ್ತಿರುವ ಉಗ್ರರಿಗೆ (terrorists) ಪಾಠ ಕಲಿಸುವ ಕೆಲಸವನ್ನು ಭಾರತೀಯ ಸೇನೆ ನಿನ್ನೆ ರಾತ್ರಿಯಿಂದ ಆರಂಭಿಸಿದೆ ಮತ್ತು ಮೊದಲ ದಾಳಿಯಲ್ಲೇ ಉಗ್ರರ ಹಲವಾರು ನೆಲೆಗಳು ಧ್ವಂಸಗೊಂಡಿವೆ. ಬೆಳಗಾವಿಯಲ್ಲಿರುವ ಮಾಜಿ ಸೈನಿಕರು ಸೇನಾ ಕಾರ್ಯಾಚರಣೆಯನ್ನು ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಸೈನಿಕರು, ಉಗ್ರರ ನೆಲೆಗಳನ್ನು ನೆಲಸಮ ಮಾಡುವ ಕೆಲಸ ಭಾರತಸ ಸೇನೆ ಶುರುಮಾಡಿದ್ದು ಬಹಳ ಖುಷಿಯಾಗುತ್ತಿದೆ, ಪಾಪಿ ಪಾಕಿಸ್ತಾನದ ನೀಚ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕಿತ್ತು, ಭಾರತದ ಬಲಿಷ್ಠ ಸೇನೆಯನ್ನು ಎದುರು ಹಾಕಿಕೊಳ್ಳುವ ಕೆಲಸ ಮಾಡಿದೆ, ಹೇಡಿಗಳಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ:Operation Sindoor: ಆಪರೇಷನ್ ಸಿಂಧೂರ್ ನಡುವೆ ಇಂದು ದೇಶಾದ್ಯಂತ ಮಾಕ್ ಡ್ರಿಲ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 07, 2025 10:32 AM