AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Sindoor: ಆಪರೇಷನ್ ಸಿಂಧೂರ್ ನಡುವೆ ಇಂದು ದೇಶಾದ್ಯಂತ ಮಾಕ್ ಡ್ರಿಲ್Operation Sindoor: ಆಪರೇಷನ್ ಸಿಂಧೂರ್ ನಡುವೆ ಇಂದು ದೇಶಾದ್ಯಂತ ಮಾಕ್ ಡ್ರಿಲ್

Operation Sindoor: ಆಪರೇಷನ್ ಸಿಂಧೂರ್ ನಡುವೆ ಇಂದು ದೇಶಾದ್ಯಂತ ಮಾಕ್ ಡ್ರಿಲ್

ಗಂಗಾಧರ​ ಬ. ಸಾಬೋಜಿ
|

Updated on:May 07, 2025 | 10:04 AM

Share

ಪಹಲ್ಗಾಮ್‌ ದಾಳಿ ಬಳಿಕ ಇಡೀ ದೇಶವೇ ಪಾಕ್‌ ವಿರುದ್ಧ ಸಮರಕ್ಕೆ ಅಣಿಯಾಗಿದೆ. ದೇಶದ ಗಡಿಯಲ್ಲಿ ಯಾವ ಕ್ಷಣದಲ್ಲಾದ್ರೂ ವಾರ್‌ ಘೋಷಣೆ ಆಗೋ ಲಕ್ಷಣ ಕಾಣುತ್ತಿದೆ. ಇದರ ನಡುವೆ ದೇಶಾದ್ಯಂತ ಮಾಕ್‌ಡ್ರಿಲ್‌ಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದ್ದು, ಇಂದು ಕರ್ನಾಟಕದಲ್ಲಿ ಯುದ್ಧದ ಸೈರನ್‌ಗಳು ಮೊಳಗಲಿವೆ.

ಬೆಂಗಳೂರು, ಮೇ 07: ರಾತ್ರೋರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಪ್ರತಿಕಾರದ ದಾಳಿ ಮಾಡಲಾಗಿದೆ. ಇತ್ತ ಕರ್ನಾಟಕ ಸೇರಿ ದೇಶಾದ್ಯಂತ ಇಂದು ಮಾಕ್ ಡ್ರಿಲ್ ನಡೆಯಲಿದೆ. ಯುದ್ಧ ನಡೆದರೆ ಏನೆಲ್ಲಾ ಪದ್ಧತಿ, ರೀತಿ ರಿವಾಜುಗಳನ್ನು ಪಾಲಿಸಬೇಕೆಂದು ಭದ್ರತಾ ಪಡೆ ಪಾಠ ಮಾಡಲಿದೆ. ದೇಶದ ನಾಗರಿಕರು, ಜನಸಾಮಾನ್ಯರನ್ನೂ ಯುದ್ಧಕ್ಕೆ ಭಾರತ ಸರ್ಕಾರ ಅಣಿಗೊಳಿಸಲು ತಯಾರಾಗಿದೆ. ಬೆಂಗಳೂರಿನಲ್ಲಿ ಇಂದು ಸಂಜೆ 5.30ರಿಂದ ಸಂಜೆ 7 ಗಂಟೆಯವರೆಗೆ ಮಾಕ್​ ಡ್ರಿಲ್​ ನಡೆಯುವ ಸಾಧ್ಯತೆ ಇದೆ. ದೇಶಾದ್ಯಂತ ನಡೆಯಲಿರುವ ಮಾಕ್ ಡ್ರಿಲ್ ಲೈವ್ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Published on: May 07, 2025 07:11 AM

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More