ಚಿಕ್ಕಮಗಳೂರು ಕೆಡಿಪಿ ಸಭೆಯಲ್ಲಿ ಶಾಸಕ ತಮ್ಮಯ್ಯ ಮತ್ತು ಎಮ್ಮೆಲ್ಸಿ ರವಿ ನಡುವೆ ಮಾತಿನ ಚಕಮಕಿ

Updated on: May 17, 2025 | 5:44 PM

ತಮ್ಮಯ್ಯ ಮತ್ತು ರವಿ ಒಂದು ಕಾಲದಲ್ಲಿ ಆಪ್ತಮಿತ್ರರು ಆದರೆ, ಕಳೆದ ವಿಧಾನಸಭಾ ಚುನಾವಭೆಯಲ್ಲಿ ತಮ್ಮಯ್ಯ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ರವಿ ವಿರುದ್ಧ ಜಯ ಸಾಧಿಸಿದ ಬಳಿಕ ಅವರಿಬ್ಬರು ಹಾವು ಮುಂಗುಲಿಯಂತೆ ಆಗಿದ್ದಾರೆ. ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ ಅಸಮಾಧಾನ ರವಿಗಿರಬಹುದು ಮತ್ತು ಗೆದ್ದ ಹಮ್ಮು ತಮ್ಮಯ್ಯನಿಗಿದ್ದೀತು.

ಚಿಕ್ಕಮಗಳೂರು, ಮೇ 17: ಚಿಕ್ಕಮಗಳೂರು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಬರೀ ಗಲಾಟೆ ಮತ್ತು ಗದ್ದಲ. ಮೊದಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಮತ್ತು ಪತ್ರಕರ್ತರ ನಡುವೆ ಜಟಾಪಟಿ ಆಮೇಲೆ ಚಿಕ್ಕಮಗಳೂರು ಶಾಸಕ ಹೆಚ್ ಡಿ ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಮಧ್ಯೆ ಮಾತಿನ ಯುದ್ಧ. ಈ ಸಭೆಯ ಅಧ್ಯಕ್ಷರು ಉಸ್ತುವಾರಿ ಸಚುವರಾಗಿದ್ದರೂ ಪ್ರತಿಯೊಂದಕ್ಕೂ ತಮ್ಮಯ್ಯ ಉತ್ತರ ಕೊಡಲಾರಂಭಿಸಿದ್ದು ಮತ್ತು ಸಭಾಧ್ಯಕ್ಷನಂತೆ ವರ್ತಿಸಿದ್ದು ರವಿಯವರಿಗೆ ಸರಿಕಾಣಿಸಲಿಲ್ಲ. ಅವರು ಎದ್ದುನಿಂತು ಜಾರ್ಜ್ ಅವರ ಕಡೆ ನೋಡುತ್ತ ಸಭಾಧ್ಯಕ್ಷರೇ, ನೀವು ಮಾತಾಡಿ, ಸಭೆ ನಿಮ್ಮ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ ಎನ್ನುತ್ತಾರೆ. ತಮ್ಮಯ್ಯ ಏನೆಲ್ಲ ಸಮಜಾಯಿಷಿ ನೀಡಲು ಪ್ರಯತ್ನಿಸುತ್ತಾರೆ, ಅದರೆ ರವಿ ಕೇಳಲ್ಲ.

ಇದನ್ನೂ ಓದಿ:    ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರವು ₹ 300 ಇಳಿಸಿ ಈಗ ₹ 50 ರಷ್ಟು ಮಾತ್ರ ಹೆಚ್ಚಿಸಿದೆ: ಸಿಟಿ ರವಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ