Chikmagalur News: ಅರಣ್ಯದಲ್ಲಿ ಬೆಟ್ಟದ ಮೇಲೆ ಮನೆ ಕಟ್ಟಿಕೊಂಡು ವಾಸವಾಗಿರುವ ಕುಟುಂಬ 5 ದಶಕಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತ!

|

Updated on: Jul 22, 2023 | 2:22 PM

ಸರ್ಕಾರಗಳಿಗೆ ಇವರು ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಆದರೆ ಅದು ಕಾಡಿನಲ್ಲಿ ಬೆಟ್ಟದ ಮೇಲೆ ಮನೆ ಕಟ್ಟಿಕೊಂಡವರ ಅರಣ್ಯರೋದನವಾಗುತ್ತಿದೆ.

ಚಿಕ್ಕಮಗಳೂರು: ಗುಡ್ಡದ ಮೇಲೆ ಕಟ್ಟಿದ ಮನೆ ಕಣ್ಣಿಗೆ ಮರೆಯಾಗದು, ಸುಲಭವಾಗಿ ಕಾಣುತ್ತದೆ ಅನ್ನುತ್ತಾರೆ. ಜಿಲ್ಲೆಯ ಕಳಸ ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾವನದ (Kudremukh National Park) ಭಾಗವಾಗಿರುವ ಕ್ಯಾತನಮಕ್ಕಿ ಎಂಬಲ್ಲಿ ಲಿಂಗಪ್ಪ (Lingappa) ಎನ್ನುವವರ ಕುಟುಂಬ ಕಳೆದ 5 ದಶಕಗಳಿಂದ ವಾಸವಾಗಿದೆ. ಅರಣ್ಯ ಹಕ್ಕು ಕಾಯ್ದೆ (Forest Conservation Act) ಅಡಿ ಮಂಜೂರಾದ ಜಮೀನಲ್ಲಿ ಲಿಂಗಪ್ಪ ಮನೆಕೊಂಡು ಪತ್ನಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಬೆಟ್ಟದ ಮೇಲೆ ಒಂಟಿ ಮನೆ ಸುಂದರ ಪರಿಸರ, ಸುತ್ತಮುತ್ತ ಹಸಿರು, ಉಸಿರಾಡಲು ಸ್ವಚ್ಛ ಗಾಳಿ-ಎಲ್ಲ ಅದ್ಭುತ. ಆದರೆ, ಲಿಂಗಪ್ಪರ ಮನೆಗೆ ಮೂಲಭೂತ ಸೌಕರ್ಯಗಳಿಲ್ಲ; ಇವರ ಮನೆ ರಸ್ತೆಯಿಂದ 15 ಕಿಮೀ ದೂರದಲ್ಲಿದೆ! ಅಗತ್ಯ ವಸ್ತುಗಳನ್ನು ತರಲು ಪಟ್ಟಣಕ್ಕೆ ಹೋಗಬೇಕಾದರೆ ಇವರು ಅಷ್ಟು ದೂರ ನಡೆಯಬೇಕು! ರಸ್ತೆ ನೋಡಿ ಹೇಗಿದೆ. ತಗ್ಗು ಪ್ರದೇಶ ದಾಟಲು ಲಿಂಗಪ್ಪ ಕುಟುಂಬ ಮರದ ದಿಂಡು ಮತ್ತು ರೈಲಿನ ಟ್ರ್ಯಾಕ್ ನಂತೆ ಕಾಣುವ ಕಬ್ಬಿಣದ ತುಂಡಿನಿಂದ ನಿರ್ಮಿಸಿಕೊಂಡಿರುವ ಮೇಕ್ ಶಿಫ್ಟ್ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆಯಬೇಕು. ಸರ್ಕಾರಗಳಿಗೆ ಇವರು ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಆದರೆ ಅದು ಕಾಡಿನಲ್ಲಿ ಬೆಟ್ಟದ ಮೇಲೆ ಮನೆ ಕಟ್ಟಿಕೊಂಡವರ ಅರಣ್ಯರೋದನವಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on