ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!

Edited By:

Updated on: Mar 23, 2026 | 12:06 PM

ವರನಟ ಡಾ. ರಾಜ್​​ಕುಮಾರ್, ಪುನೀತ್ ರಾಜ್​ಕುಮಾರ್ ಬಗ್ಗೆ ಗೌರವ ಭಾವ ಹೊಂದಿರುವ, ನಟ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಯೊಬ್ಬರು ಇದೀಗ ಗಮನ ಸೆಳೆದಿದ್ದಾರೆ. ಅಣ್ಣಾವ್ರ ಹುಟ್ಟೂರು ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ಕಿಚ್ಚ ಸುದೀಪ್, ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಅವರ ಗುಡಿ ಕಟ್ಟಿಸಿರುವ ಸಿದ್ದರಾಜು ಸುದೀಪ್​​ರನ್ನು ನಿತ್ಯ ಆರಾಧಿಸುತ್ತಾರೆ. ಇಲ್ಲಿದೆ ವಿಡಿಯೋ.

ಚಾಮರಾಜನಗರ, ಮಾರ್ಚ್ 23: ಅಣ್ಣಾವ್ರ ಹುಟ್ಟೂರಾಗಿರುವ, ಕರ್ನಾಟಕ-ತಮಿಳುನಾಡು ಗಡಿ ಭಾಗದ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ಇದೀಗ ಕನ್ನಡಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ. ದೊಡ್ಡ ಗಾಜನೂರು ಗ್ರಾಮದ ಸಿದ್ದರಾಜು ಎಂಬ ಅಭಿಮಾನಿ, ಸುದೀಪ್ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಐಸ್ ಕ್ಯಾಂಡಿ ಮಾರಾಟ ಮಾಡುತ್ತಾ ಜೀವನ ನಡೆಸುವ ಸಿದ್ದರಾಜುಗೆ ‘ಕಿಚ್ಚ’ ಸುದೀಪ್ ಎಂದರೆ ಪಂಚಪ್ರಾಣ. ಇದಕ್ಕಾಗಿ ಅವರು ಮನೆ ಬಳಿ ಸುದೀಪ್‌ಗಾಗಿ ಗುಡಿ ನಿರ್ಮಿಸಿದ್ದು, ಪ್ರತಿದಿನವೂ ನಿತ್ಯ ಆರಾಧನೆ ಮಾಡುತ್ತಾರೆ! ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ಕೂಡ ನಡೆಸುತ್ತಾರೆ. ಸುದೀಪ್ ಜೊತೆಗೆ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಅವರನ್ನೂ ಗುಡಿಯಲ್ಲಿ ಆರಾಧಿಸುತ್ತಾ ಬರುತ್ತಿದ್ದಾರೆ.

ಸುದೀಪ್ ಅವರ ಪ್ರತಿಯೊಂದು ಸಿನಿಮಾವನ್ನೂ ‘ಫಸ್ಟ್ ಡೇ ಫಸ್ಟ್ ಶೋ’ ನೋಡುವ ಸಿದ್ದರಾಜುವಿನ ಈ ಅಭಿಮಾನಕ್ಕೆ ಅವರ ಕುಟುಂಬದವರು ಕೂಡ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಸುದೀಪ್ ಮಾತ್ರವಲ್ಲದೆ ವರನಟ ಡಾ. ರಾಜ್​​ಕುಮಾರ್, ಪುನೀತ್ ರಾಜ್​ಕುಮಾರ್​ ಬಗ್ಗೆಯೂ ಸಿದ್ದರಾಜು ಅಪಾರ ಅಭಿಮಾನವಿರಿಸಿಕೊಂಡಿದ್ದಾರೆ. ಸದ್ಯ, ನಟ ಸುದೀಪ್ ಮೇಲಿನ ಸಿದ್ದರಾಜು ಅವರ ಈ ವಿಶಿಷ್ಟ ಅಭಿಮಾನ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us