ಅಪ್ಪು.. ಅಪ್ಪು.. ಎಂದು ಕೂಗಿದ ಅಭಿಮಾನಿಗಳಿಗೆ ಶಿವಣ್ಣ ವಾರ್ನಿಂಗ್; ಇಲ್ಲಿದೆ ವಿಡಿಯೋ
ಚಾಮರಾಜನಗರದಲ್ಲಿ ನಡೆದ ‘ಬೈರಾಗಿ’ ಪ್ರೀ-ರಿಲೀಸ್ ಇವೆಂಟ್ನಲ್ಲೂ ಹಾಗೆಯೇ ಆಗಿದೆ. ಎಲ್ಲರೂ ಅಪ್ಪು ಅಪ್ಪು ಎಂದು ಕೂಗಿದ್ದಾರೆ. ಇದಕ್ಕೆ ಶಿವಣ್ಣ ಗರಂ ಆದರು.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಹಲವು ತಿಂಗಳು ಕಳೆದಿದೆ. ಆದರೆ, ಅವರಿಲ್ಲ ಎನ್ನವ ನೋವು ಈಗಲೂ ಕಾಡುತ್ತಲೇ ಇದೆ. ಪುನೀತ್ ಅವರು ಇಲ್ಲ ಎಂಬುದನ್ನು ರಾಜ್ ಕುಟುಂಬದ ಬಳಿ ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಿವರಾಜ್ಕುಮಾರ್ (Shivarajkumar) ಅವರು ಪುನೀತ್ ರಾಜ್ಕುಮಾರ್ ಅವರನ್ನು ಹೃದಯದಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ‘ಪುನೀತ್ ರಾಜ್ಕುಮಾರ್ ಇಲ್ಲವಲ್ಲ’ ಎಂದರೆ ಅವರಿಗೆ ತುಂಬಾನೇ ಕೋಪಬಂದು ಬಿಡುತ್ತದೆ. ಚಾಮರಾಜನಗರದಲ್ಲಿ ನಡೆದ ‘ಬೈರಾಗಿ’ ಪ್ರೀ-ರಿಲೀಸ್ ಇವೆಂಟ್ನಲ್ಲೂ ಹಾಗೆಯೇ ಆಗಿದೆ. ಎಲ್ಲರೂ ಅಪ್ಪು ಅಪ್ಪು ಎಂದು ಕೂಗಿದ್ದಾರೆ. ಇದಕ್ಕೆ ಶಿವಣ್ಣ ಗರಂ ಆದರು. ಅಲ್ಲದೆ, ಫ್ಯಾನ್ಸ್ಗೆ ತಮ್ಮದೇ ಶೈಲಿಯಲ್ಲಿ ವಾರ್ನಿಂಗ್ ನೀಡಿದರು.
ಇದನ್ನೂ ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ತಂದೆ ನೆನೆದು ಕಣ್ಣೀರು ಹಾಕಿದ ಶಿವಣ್ಣ; ಇದಕ್ಕೆ ಕಾರಣವಾಯ್ತು ಆ ಒಂದು ಹಾಡು