ತರಕಾರಿ ಬೆಲೆ ಗಗನಕ್ಕೆ: ದಲ್ಲಾಳಿಗಳ ಶೋಷಣೆ ನಿಲ್ಲದ ಹೊರತು ರೈತ ಸಮುದಾಯದ ಬವಣೆ ತಪ್ಪಲಾರದು!

ತರಕಾರಿ ಬೆಲೆ ಗಗನಕ್ಕೆ: ದಲ್ಲಾಳಿಗಳ ಶೋಷಣೆ ನಿಲ್ಲದ ಹೊರತು ರೈತ ಸಮುದಾಯದ ಬವಣೆ ತಪ್ಪಲಾರದು!

TV9 Web
| Updated By: ಆಯೇಷಾ ಬಾನು

Updated on: Nov 25, 2021 | 3:38 PM

ಬೆಂಗಳೂರಿನಲ್ಲಿ ಇವತ್ತು ಬೀನ್ಸ್ ಯಾವ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಅಂತ ನಿಮಗೆ ಗೊತ್ತಿರಬಹುದು. ಕೆಜಿಗೆ ರೂ 90 ರಿಂದ 100. ಅದರೆ ನಾರಾಯಣ ಸ್ವಾಮಿ ಅವರಿಗೆ ಸಿಗುತ್ತಿರುವ ಹಣ ಪ್ರತಿ ಕೇಜಿಗೆ ಕೇವಲ ರೂ. 25 ರಿಂದ 30!

ಉತ್ತಮ ಮಳೆ, ಉತ್ತಮ ಫಸಲು ಅಂತ ಹೇಳೋದನ್ನು ನಾವು ಕೇಳ್ತಾ ಇರ್ತೀವಿ. ಅದರೆ ಅದನ್ನು ಬೆಳೆದ ರೈತ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾನಾ? ಊಹೂಂ, ಅನ್ನದಾತನ ಪಾಲಿಗೆ ಅದು ಮರೀಚಿಕೆಯೇ. ಯಾಕೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ದಲ್ಲಾಳಿಗಳು ರೈತರನ್ನು ಶೋಷಿಸವುದು ನಮ್ಮ ದೇಶದಲ್ಲಿ ನಿಲ್ಲಲಾರದು. ನಮ್ಮ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಷ್ಟ ಅನುಭವಿಸುವರು ಇಬ್ಬರು ಅನಿಸುತ್ತದೆ. ಒಬ್ಬ ರೈತ ಮತ್ತೊಬ್ಬ ಗ್ರಾಹಕ. ಈ ವಿಡಿಯೋ ನೋಡಿದರೆ ಅದು ಹೇಗೆ ಅನ್ನೋದು ಗೊತ್ತಾಗುತ್ತದೆ. ಚಿಕ್ಕಬಳ್ಳಾಪುರದ ಟಿವಿ9 ವರದಿಗಾರ ಬೀಮಪ್ಪ ಪಾಟೀಲ ಜಿಲ್ಲೆಯ ಕಲಗುರ್ಕಿ ಗ್ರಾಮದ ಒಬ್ಬ ರೈತರೊಂದಿಗೆ ಮಾತುಕತೆ ನಡೆಸಿ ಅವರಿಗೆ ಆಗುತ್ತಿರುವ ಅನ್ಯಾಯ ಮತ್ತು ಮೋಸವನ್ನು ನಮಗೆ ಅರ್ಥಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಅಂದಹಾಗೆ ತಮ್ಮ ಎರಡೆಕರೆ ತೋಟದಲ್ಲಿ ಬೀನ್ಸ್ ಬೆಳೆದಿರುವ ಈ ರೈತರ ಹೆಸರು ನಾರಾಯಣ ಸ್ವಾಮಿ.

ನಿಮಗೆ ಗೊತ್ತಿದೆ. ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಕೆಜಿ ಟೊಮಟೊ ಬೆಲೆ ರೂ 100 ಅಗಿದೆ. ಉಳಿದೆಲ್ಲ ತರಕಾರಿಗಳ ಬೆಲೆಗಳು ಮೂರು ಪಟ್ಟು ಹೆಚ್ಚಾಗಿವೆ. ಪರಿಸ್ಥಿತಿ ಹೀಗಿರುವಾಗ ರೈತ ಸಮುದಾಯ ಚೆನ್ನಾಗಿ ದುಡ್ಡು ಮಾಡುತ್ತಿರಬೇಕು ಅಂತ ನಾವಂದುಕೊಳ್ಳುತ್ತೇವೆ.

ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಇದಕ್ಕೆ ನಾರಾಯಣ ಸ್ವಾಮಿಯವರೇ ಜ್ವಲಂತ ಉದಾಹರಣೆ. ಅವರು ತಮ್ಮ ಎರಡೆಕರೆ ತೋಟದಲ್ಲಿ ಬೀನ್ಸ್ ಬೆಳೆದಿದ್ದಾರೆ. ಮಳೆ ಎಡೆಬಿಡದೆ ಸುರಿಯುತ್ತಿದ್ದರೂ ಅವರ ಬೆಳೆ ಹಾಳಾಗಿಲ್ಲ. ಓಕೆ, ಬೆಂಗಳೂರಿನಲ್ಲಿ ಇವತ್ತು ಬೀನ್ಸ್ ಯಾವ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಅಂತ ನಿಮಗೆ ಗೊತ್ತಿರಬಹುದು. ಕೆಜಿಗೆ ರೂ 90 ರಿಂದ 100. ಅದರೆ ನಾರಾಯಣ ಸ್ವಾಮಿ ಅವರಿಗೆ ಸಿಗುತ್ತಿರುವ ಹಣ ಪ್ರತಿ ಕೇಜಿಗೆ ಕೇವಲ ರೂ. 25 ರಿಂದ 30!

ಆಶ್ಚರ್ಯವಾಗುತ್ತದಲ್ಲವೇ? ರೈತ ಸಮದಾಯದ ದುಸ್ಥಿತಿಗೆ ನಾರಾಯಣ ಸ್ವಾಮಿ ಅವರು, ದಲ್ಲಾಳಿಗಳು ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ದೂಷಿಸುತ್ತಾರೆ. ಅವರು ತಮ್ಮ ಬೆಳೆಯನ್ನು ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಒಯ್ದರೂ ದಲ್ಲಾಳಿಗಳು ತೆಗೆದುಕೊಳ್ಳುವ ಬೆಲೆಗೆ ಸಗಟು ದರದಲ್ಲಿ ಅವರು ತಮ್ಮ ಬೆಳೆ ಮಾರಾಟ ಮಾಡಬೇಕಾಗುತ್ತದಂತೆ. ಈ ದುರ್ವ್ಯವಸ್ಥೆ ಯಾವಾಗ ಉತ್ತಮಗೊಳ್ಳುತ್ತೋ ಅಂತ ಅವರು ನಿಟ್ಟುಸಿರಾಗುತ್ತಾರೆ.

ಇದನ್ನೂ ಓದಿ:  ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್​ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಪಿಡಬ್ಲೂಡಿ ಶಾಂತಗೌಡ; ವಿಡಿಯೋ ನೋಡಿ