ಬರದ ಬಿಸಿ ನಡುವೆ ಕೆಲವು ಜಿಲ್ಲೆಗಳಲ್ಲಿ ಮಳೆ ಸಿಂಚನ: ಬಿಸಿಲಿನಿಂದ ಕಂಗಟ್ಟಿದ್ದ ರಾಯಚೂರು, ಯಾದಗಿರಿಗೆ ತಂಪೆರೆದ ಮಳೆರಾಯ

Updated on: Sep 23, 2026 | 9:24 PM

ಬಿಸಿಲಿನಿಂದ ಕಂಗಟ್ಟಿದ್ದ ರಾಯಚೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಹೌದು.. ಇಮದು (ಸೆ.23) ಸಂಜೆಯಾಗುತ್ತಿದ್ದಂತೆಯೇ ರಾಯಚೂರು ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರಿಸಿದ್ದಾನೆ. ರಾಯಚೂರು ನಗರ,ಮಾನ್ವಿ,ಲಿಂಗಸುಗೂರು,ದೇವದುರ್ಗ, ಸಿರವಾರ,ಸಿಂಧನೂರು ಸೇರಿ ಹಲವೆಡೆ ಕಳೆದ ಎರಡು ಗಂಟೆಯಿಂದ ಗುಡುಗು ಸಹಿತ ಭಾರೀ ಮಳೆಯಾಗಿದ್ದು,ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಯಾದಗಿರಿಯಲ್ಲೂ ಸಹ ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದ್ದು, ಇದರಿಂದ ರೈತರು ಫುಲ್ ಖುಷ್ ಆಗಿದ್ದಾರೆ.

ರಾಯಚೂರು, (ಸೆಪ್ಟೆಂಬರ್ 23): ಬಿಸಿಲಿನಿಂದ ಕಂಗಟ್ಟಿದ್ದ ರಾಯಚೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಹೌದು.. ಇಮದು (ಸೆ.23) ಸಂಜೆಯಾಗುತ್ತಿದ್ದಂತೆಯೇ ರಾಯಚೂರು ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರಿಸಿದ್ದಾನೆ. ರಾಯಚೂರು ನಗರ,ಮಾನ್ವಿ,ಲಿಂಗಸುಗೂರು,ದೇವದುರ್ಗ, ಸಿರವಾರ,ಸಿಂಧನೂರು ಸೇರಿ ಹಲವೆಡೆ ಕಳೆದ ಎರಡು ಗಂಟೆಯಿಂದ ಗುಡುಗು ಸಹಿತ ಭಾರೀ ಮಳೆಯಾಗಿದ್ದು,ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಯಾದಗಿರಿಯಲ್ಲೂ ಸಹ ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ.  ಇಷ್ಟೇ ಅಲ್ಲದೇ ಕಾರವಾರ, ವಿಜಯನಗರ ಜಿಲ್ಲೆಯಲ್ಲೂ ಸಹ ಮಳೆಯಾಗಿದ್ದು,ರೈತರು ಫುಲ್ ಖುಷ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More