ತೀವ್ರ ಸ್ವರೂಪ ಪಡೆದ ಬಲ್ಡೋಟಾ ಹೋರಾಟದ ಕಿಚ್ಚು, ಕಬ್ಬಿಣದ ಬಾಗಿಲು ಮುರಿದು ಕಾರ್ಖಾನೆಗೆ ನುಗ್ಗಿದ ರೈತರು

Edited By:

Updated on: Jul 21, 2026 | 5:15 PM

ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧರ ರೈತರ ಪ್ರತಿಭಟನೆ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಹಲವು ದಿನಗಳಿಂದ ಬಲ್ಡೋಟಾ ಕಾರ್ಖಾನೆ ತೆರವುಗೊಳಿಸುವಂತೆ ರೈತರು ಧರಣಿ ನಡೆಸಿದ್ದು, ಇದೀಗ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.ಹೌದು.. ಬಲ್ಡೋಟಾ ಕಾರ್ಖಾನೆಯೊಳಗಿರುವ ಕೆರೆಯನ್ನು ಸಾರ್ವಜನಿಕ ಮುಕ್ತ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.

ಕೊಪ್ಪಳ, (ಜುಲೈ 21): ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ (Baldota Steel Factory )ವಿರುದ್ಧರ ರೈತರ ಪ್ರತಿಭಟನೆ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಹಲವು ದಿನಗಳಿಂದ ಬಲ್ಡೋಟಾ ಕಾರ್ಖಾನೆ ತೆರವುಗೊಳಿಸುವಂತೆ ರೈತರು ಧರಣಿ ನಡೆಸಿದ್ದು, ಇದೀಗ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೌದು.. ಬಲ್ಡೋಟಾ ಕಾರ್ಖಾನೆಯೊಳಗಿರುವ ಕೆರೆಯನ್ನು ಸಾರ್ವಜನಿಕ ಮುಕ್ತ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಕಬ್ಬಿಣದ ಡೋರ್ ಮುರಿದು ರೈತರು ಕಾರ್ಖಾನೆಗೆ ನುಗ್ಗಿದ್ದಾರೆ. ಇನ್ನು ಪ್ರತಿಭಟನೆ ವೇಳೆ ಏಕಾಏಕಿ ರೈತ ಯಮನೂರಪ್ಪ ಕೆರೆಗೆ ಹಾರಿದ್ದು, ಬಳಿಕ ಈಜಿ ದಡ ಸೇರಿದ್ದಾರೆ. ಇನ್ನು ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಬಳ್ಳಾರಿ ವಲಯ ಐಜಿಪಿ ಹರ್ಷ ದೌಡಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More