ಟಾಸ್ಕ್ ವೇಳೆ ಬಡಿದಾಡಿಕೊಂಡ ಉಗ್ರಂ ಮಂಜು, ಶಿಶಿರ್; ದೊಡ್ಮನೆ ಮತ್ತೆ ರಣರಂಗ

|

Updated on: Oct 21, 2024 | 3:43 PM

ಜಗದೀಶ್ ಅವರು ಎಲಿಮಿನೇಟ್ ಆದ ಬಳಿಕ ಬಿಗ್ ಬಾಸ್​ ಮನೆ ಸೈಲೆಂಟ್ ಆಗಿತ್ತು. ಆದರೆ ಈಗ ಮತ್ತೆ ಜಗಳ ಶುರುವಾಗಿದೆ. ಕ್ಯಾಪ್ಟನ್ ಆಗಲು ಬಿಗ್ ಬಾಸ್ ನೀಡಿದ್ದ ಟಾಸ್ಕ್ ಆಡುವ ವೇಳೆ ಶಿಶಿರ್ ಮತ್ತು ಉಗ್ರಂ ಮಂಜು ಅವರು ಬಡಿದಾಡಿಕೊಂಡಿದ್ದಾರೆ. ಇದರ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಇಂದು (ಅ.21) ಈ ಸಂಚಿಕೆ ಪ್ರಸಾರ ಆಗಲಿದೆ.

ದಿನ ಕಳೆದಂತೆಲ್ಲ ಬಿಗ್ ಬಾಸ್​ ಮನೆಯಲ್ಲಿ ಟೆನ್ಷನ್ ಹೆಚ್ಚುತ್ತಿದೆ. ಶಿಶಿರ್ ಬಳಿಕ ಅಲ್ಪಾವಧಿಗೆ ಹನುಮಂತ ಕ್ಯಾಪ್ಟನ್ ಆಗಿದ್ದರು. ಈಗ ಹೊಸ ಕ್ಯಾಪ್ಟನ್ ಆಯ್ಕೆಗೆ ಟಾಸ್ಕ್ ನೀಡಲಾಗಿದೆ. ಈ ವೇಳೆ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಜಗಳ ನಡೆದಿದೆ. ಇಬ್ಬರೂ ಬಡಿದಾಡಿಕೊಂಡಿದ್ದಾರೆ. ಟಾಸ್ಕ್​ ಸಲುವಾಗಿ ನೀಡಿದ್ದ ವಸ್ತುಗಳಿಗೂ ಹಾನಿ ಮಾಡಲಾಗಿದೆ. ಇದಕ್ಕೆಲ್ಲ ಖಂಡಿತವಾಗಿಯೂ ಬಿಗ್ ಬಾಸ್​ ಶಿಕ್ಷೆ ನೀಡಲಿದ್ದಾರೆ. ಎಲ್ಲರ ಜಗಳ ನೋಡಿ ವೈಲ್ಡ್ ಕಾರ್ಡ್ ಸ್ಪರ್ಧಿ ಹನುಮಂತನಿಗೆ ಚಿಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.