‘ಏನೇನೋ ಬೊಗಳುತ್ತಾನೆ’: ಪದೇಪದೇ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ

Updated on: Oct 09, 2024 | 5:04 PM

ಎರಡನೇ ವಾರದಲ್ಲಿ ಜಗದೀಶ್​ ಹಾರಾಟ ಅತಿಯಾಗಿದೆ. ಬೇಕು ಬೇಕಂತಲೇ ಅವರು ಇನ್ನುಳಿದ ಸ್ಪರ್ಧಿಗಳನ್ನು ಕೆಣಕುತ್ತಿದ್ದಾರೆ. ಕ್ಯಾಪ್ಟನ್​ ಹಂಸಾ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಜಗದೀಶ್​ ನೀಡುತ್ತಿರುವ ಕಾಟಕ್ಕೆ ಬಿಗ್​ ಬಾಸ್​ ಮನೆಯ ಸದಸ್ಯರು ಬೇಸತ್ತಿದ್ದಾರೆ. ನಟಿ ಭವ್ಯಾ ಅವರಂತೂ ಖಡಕ್​ ತಿರುಗೇಟು ನೀಡಿದ್ದಾರೆ. ಆ ಪ್ರೋಮೋ ಇಲ್ಲಿದೆ..

ಕ್ಯಾಪ್ಟನ್​ ಆಗಿರುವ ಹಂಸಾ ಅವರಿಗೆ ಕಾಟ ಕೊಡಬೇಕು ಎಂಬ ಉದ್ದೇಶದಿಂದಲೇ ಜಗದೀಶ್​ ಅವರು ಇಲ್ಲಸಲ್ಲದ ಡಿಮ್ಯಾಂಡ್ ಮಾಡುತ್ತಿದ್ದಾರೆ. ‘ಸಾಯಂಕಾಲ ಪನೀರ್​ ಬಟರ್ ಮಸಾಲಾ ಮತ್ತು ರೋಟಿ ಬೇಕು’ ಅಂತ ಜಗದೀಶ್​ ಕೂಗಿ ಹೇಳಿದ್ದಾರೆ. ‘ಈ ಯಪ್ಪ ಸುಮ್ಮನೇ ಫೋಟೇಜ್ ತಗೋಳೋಕೆ ಏನೋ ಬೊಗಳುತ್ತಾ ಇರುತ್ತಾನೆ’ ಎಂದು ಹಂಸಾ ಗೊಣಗಿದ್ದಾರೆ. ಜಗದೀಶ್​ ಮಾತಿನಿಂದ ಭವ್ಯಾಗೂ ಕಿರಿಕಿರಿ ಆಗಿದೆ. ‘ಊಟ ಮಾಡುವಾಗಲಾದ್ರೂ ನೆಮ್ಮದಿ ಕೊಡಿ’ ಎಂದು ಭವ್ಯಾ ಅವರು ಧ್ವನಿ ಏರಿಸಿದ್ದಾರೆ. ಈ ಮಾತಿನಿಂದ ಜಗಳ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More