ಕೊನೆಗೂ ‘ಮಕ್ನಾ’ ಆನೆ ಸೆರೆ: ಪುಂಡಾಟ ಮೆರೆಯುತ್ತಿದ್ದ ಕಾಡಾನೆ ಸೆರೆ ಹಿಡಿಯುವ ರೋಚಕ ವಿಡಿಯೋ ನೋಡಿ

Edited By:

Updated on: Jul 29, 2024 | 3:43 PM

ಬನ್ನೇರುಘಟ್ಟದ ತಟ್ಟಗುಪ್ಪೆ ಅರಣ್ಯ ಪ್ರದೇಶದಲ್ಲಿ ಪುಂಡಾನೆ ಮಕ್ನಾ ಅನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಮೂವರನ್ನು ಬಲಿ ಪಡೆದು, ಪುಂಡಾಟ ಮೆರೆಯುತ್ತಿದ್ದ ಕಾಡಾನೆ ಮಕ್ನಾ ಅನ್ನು ಸಾಕಾನೆ ಭೀಮ, ಮಹೇಂದ್ರ ನೆರವಿನಲ್ಲಿ ಸೆರೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ವಾಹನ ಹಿಂಬಾಲಿಸಿ ದಾಳಿ ನಡೆಸಿದೆ. ವಿಡಿಯೋ ನೋಡಿ.

ಆನೇಕಲ್, ಜುಲೈ 29: ಮೂವರನ್ನು ಬಲಿ ಪಡೆದು, ಪುಂಡಾಟ ಮೆರೆಯುತ್ತಿದ್ದ ಕಾಡಾನೆ (Elephant) ಮಕ್ನಾ ಅನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಬನ್ನೇರುಘಟ್ಟದ (Bannerughatta) ತಟ್ಟಗುಪ್ಪೆ ಅರಣ್ಯ ಪ್ರದೇಶದಲ್ಲಿ ಸಾಕಾನೆ ಭೀಮ, ಮಹೇಂದ್ರ ನೆರವಿನಲ್ಲಿ ಮಕ್ನಾ ಆನೆಯನ್ನು ಸೆರೆ ಹಿಡಿಯಲಾಗಿದೆ. ಡ್ರೋನ್ ಮೂಲಕ ಮಕ್ನಾ ಇರುವ ಸ್ಥಳ ಗುರುತಿಸಿದ್ದ ಅರಣ್ಯ ಅಧಿಕಾರಿಗಳು ನಂತರ ಮಕ್ನಾ ಆನೆಯನ್ನು ಸಾಕಾನೆಗಳು, ಮಾವುತರು ಸುತ್ತುವರೆದಿದ್ದಾರೆ. ಮಾವುತರು, ಕಾವಾಡಿಗರ ಮಾಹಿತಿ ಆಧರಿಸಿ ವೈದ್ಯರ ತಂಡ ಕೂಡ ಬಂದಿತ್ತು. ಪಶುವೈದ್ಯ, ಶಾರ್ಪ್​ಶೂಟರ್ ರಂಜನ್ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಒಂದು ಕಿ.ಮೀ. ಸಾಗಿದ್ದ ಮಕ್ನಾ ಆನೆ ನಂತರ ನಿತ್ರಾಣಗೊಂಡಿತ್ತು. ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೆ ಬಿಡಾರಕ್ಕೆ ಮಕ್ನಾ ಶಿಫ್ಟ್ ಮಾಡಲಾಗಿದೆ. ಇನ್ನು ಪುಂಡಾಟ ನಡೆಸಿದ್ದ ಮಕ್ನಾ ಕಾಡಾನೆ ಸೆರೆ ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ಅರಣ್ಯ ಸಿಬ್ಬಂದಿ ವಾಹನದ ಹಿಂಬಾಲಿಸಿ ದಾಳಿಗೆ ಮುಂದಾಗಿತ್ತು. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us