ಶಾಪಿಂಗ್ ಮಾಲ್​​​ನ ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ಹೇಗೆ ನೋಡಿ

Edited By:

Updated on: May 19, 2026 | 3:47 PM

ಶಾಪಿಂಗ್ ಮಾಡಲೇಂದು ತೆರಳಿದ್ದ 9 ಜನರು ಲಿಫ್ಟ್​​ನಲ್ಲಿ ಸಿಲುಕಿ ಪರದಾಡಿರುವ ಘಟನೆ ಶಿವಮೊಗ್ಗ ನಗರದ (Shivamogga) ಶಾಪಿಂಗ್ ಮಾಲ್​​​​​ನಲ್ಲಿ ನಡೆದಿದೆ. ಶಿವಮೊಗ್ಗ ನಗರದ ಆಲ್ಕೋಳ ವೃತ್ತದ ಬಳಿ ಇರುವ ಶಾಪಿಂಗ್ ಮಾಲ್ ನ ಲಿಫ್ಟ್​​ನಲ್ಲಿ ಅರ್ಧ ಗಂಟೆ ಕಾಲ ಸಿಲುಕಿದ್ದು, ಕೊನೆಗೆ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ.

ಶಿವಮೊಗ್ಗ, (ಮೇ 19):  ಶಾಪಿಂಗ್ ಮಾಡಲೇಂದು ತೆರಳಿದ್ದ 9 ಜನರು ಲಿಫ್ಟ್​​ನಲ್ಲಿ (Lift) ಸಿಲುಕಿ ಪರದಾಡಿರುವ ಘಟನೆ ಶಿವಮೊಗ್ಗ ನಗರದ (Shivamogga) ಶಾಪಿಂಗ್ ಮಾಲ್​​​​​ನಲ್ಲಿ (Shopping Mall) ನಡೆದಿದೆ. ಶಿವಮೊಗ್ಗ ನಗರದ ಆಲ್ಕೋಳ ವೃತ್ತದ ಬಳಿ ಇರುವ ಶಾಪಿಂಗ್ ಮಾಲ್ ನ ಲಿಫ್ಟ್​​ನಲ್ಲಿ ಅರ್ಧ ಗಂಟೆ ಕಾಲ ಸಿಲುಕಿದ್ದು, ಕೊನೆಗೆ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ.

ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಎಂಬವರು ಶಾಪಿಂಗ್​​ ಮಾಲ್​​​ನಲ್ಲಿ ಲಿಫ್ಟ್ ಪ್ರವೇಶಿಸಿದ್ದಾರೆ. ಆದ್ರೆ,​ ಲಿಫ್ಟ್‌ ನಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅರ್ಧದಲ್ಲೇನಿಂತುಕೊಂಡಿದೆ. ಇದರಿಂದ ಆತಂಕಗೊಂಡ ಕೂಗಾಡಿದ್ದು, ಇದನ್ನು ಕೇಳಿಸಿಕೊಂಡ ಮಾಲ್ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಕರೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕಾಮಿಸಿದ ಅಗ್ನಿಶಾಮಕ ಸಿಬ್ಬಂದಿ ತಂಡ, ಲಿಫ್ಟ್ ಓಪನ್ ಮಾಡಲು ನಾನಾ ಕಸರತ್ತು ನಡೆಸಿದರು. ಕೊನೆಗೆ ಕಬ್ಬಿಣದ ಡೋರ್ ಕತ್ತರಿಸಿ ಲಿಫ್ಟ್​​ನಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ, ಅಗ್ನಿ ಶಾಮಕ ಸಿಬ್ಬಂದಿಯ ಹರಸಾಹಸ ಹೇಗಿತ್ತು ಎನ್ನುವುದನ್ನು ವಿಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Yaraganavi