Loading video

ದಾವಣಗೆರೆ: ಮನೆಯೊಂದರಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದು ಯುಪಿಎಸ್ ಸ್ಫೋಟವಲ್ಲ, ಅದು ಶಾಟ್ ಸರ್ಕ್ಯೂಟ್

Updated on: Jul 01, 2025 | 11:15 AM

ಮೊದಲು ವರದಿಯಾದಂತೆ ರುದ್ರಮುನಿಯವರ ಮನೆಯಲ್ಲಿ ಅಗ್ನಿ ದುರಂತ ಯುಪಿಎಸ್ ಸ್ಫೋಟಗೊಂಡು ಸಂಭವಿಸಿಲ್ಲ, ಮನೆಯ ಹಾಲ್​ನಲ್ಲಿದ್ದ ಫಿಶ್ ಅಕ್ವೇರಿಯಂ ಬಳಿ ಶಾಟ್ ಸರ್ಕ್ಯೂಟ್ ಆಗಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಹಾಲ್​​ನಲ್ಲಿದ್ದ ಸೋಫಾ ಮತ್ತು ಇತರ ವಸ್ತುಗಳು ಬೆಂಕಿಗಾಹುತಿಯಾಗಿವೆ. ರುದ್ರಮುನಿ ಕೂಡಲೇ ಅಗ್ನಿಶಾಮಕ ದಳ ಕಚೇರಿಗೆ ಫೋನ್ ಮಾಡಿದರೂ ಸಿಬ್ಬಂದಿ ಬರುವಷ್ಟರಲ್ಲಿ ಸಾಕಷ್ಟು ಹಾನಿಯುಂಟಾಗಿದೆ.

ದಾವಣಗೆರೆ, ಜುಲೈ 1: ನಗರದ ಕಾಯಿಪೇಟೆಯಲ್ಲಿರುವ ಮನೆಯೊಂದರಲ್ಲಿ ಇಂದು ಬೆಳಗಿನ ಭಾರೀ ಅಗ್ನಿ ಅವಘಡವೊಂದು ಜರುಗಿದ್ದು ಇಬ್ಬರು ದುರಂತದಲ್ಲಿ ಮೃತಪಟ್ಟಿದ್ದಾರೆ. ದಾವಣಗೆರೆಯ ಟಿವಿ9 ವರದಿಗಾರ ಮನೆಯ ಮಾಲೀಕ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಹೆಚ್ ಎಂ ರುದ್ರಮುನಿಸ್ವಾಮಿಯೊಂದಿಗೆ (HM Rudramuni Swamy) ಮಾತಾಡಿದ್ದಾರೆ. ರುದ್ರಮುನಿಸ್ವಾಮಿಗೆ ಮನೆಯಲ್ಲಿ ನಡೆದ ದುರಂತದಿಂದ ಚೇತರಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಅಗ್ನಿ ಆಕಸ್ಮಿಕದಲ್ಲಿ ಅವರ ಅತ್ತೆ 75-ವರ್ಷದ ವಿಮಲಾ ಮತ್ತು ಬಾಮೈದ 35-ವರ್ಷದ ಕುಮಾರ ಸಾವನ್ನಪ್ಪಿದ್ದಾರೆ. ಅವರಿಬ್ಬರೂ ತಮ್ಮ ಜೊತೆಯಲ್ಲೇ ಇರುತ್ತಿದ್ದರು ಮತ್ತು ಮತ್ತೊಂದು ಬೆಡ್ ರೂಂನಲ್ಲಿ ಮಲಗಿದ್ದರು ಎಂದು ಅವರು ಭಾವುಕರಾಗಿ ಹೇಳುತ್ತಾರೆ.

ಇದನ್ನೂ ಓದಿ:  ಚಾರ್​ಮಿನಾರ್​ ಬಳಿ ಅಗ್ನಿ ಅವಘಡ, ರಜೆಗೆ ಬಂದಿದ್ದ ಮಕ್ಕಳು ಸೇರಿ 17ಮಂದಿ ಸಜೀವ ದಹನ, ಮೋದಿ ಸಂತಾಪ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ