ಭದ್ರಾವತಿ ಕಟ್ಟಿಗೆ ಮಿಲ್ಲೊಂದರಲ್ಲಿ ಅಗ್ನಿ ಅವಗಢ, ಲಕ್ಷಾಂತರ ರೂಪಾಯಿ ಮೌಲ್ಯದ ಕಟ್ಟಿಗೆ ಸುಟ್ಟು ಬೂದಿ
ಮಿಲ್ಗೆ ಬೆಂಕಿ ಬಿದ್ದ ಕೂಡಲೇ ಯಾರೋ ಅಗ್ನಿಶಾಮಕ ದಳ ಕಚೇರಿಗೆ ಫೋನ್ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಒಂಬತ್ತು ಫೈರ್ ಎಂಜಿನ್ ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕಿಳಿದರೂ ಬೆಂಕಿಯನ್ನು ತಹಬದಿಗೆ ತರುವುದು ಕಷ್ಟವಾಗಿದೆ.
ರಾಜ್ಯದಲ್ಲಿ ನಾನಾ ಭಾಗಗಳಲ್ಲಿ ಬೆಂಕಿ ಆಕಸ್ಮಿಕಗಳು ಸಂಭವಿಸುತ್ತಿರುವ ಬಗ್ಗೆ ಹಿಂದೆ ಚರ್ಚೆ ಮಾಡಿದ್ದೇವೆ. ಕಳೆದ ವರ್ಷ ಅಂದರೆ 2021 ರಲ್ಲಿ ಅಗ್ನಿ ಅವಗಢಗಳು ಸ್ವಲ್ಪ ಜಾಸ್ತಿಯೇ ನಡೆದವು ಅನ್ನೋದು ನಮ್ಮೆಲ್ಲರಿಗೆ ಗೊತ್ತಿರುವ ಸಂಗತಿ. 2022 ರ ಮೊದಲ ವಾರದಲ್ಲೇ ಶಿವಮೊಗ್ಗ ಜಿಲ್ಲೆ ಭದ್ರಾವತಿ ಪಟ್ಟಣದಲ್ಲಿರುವ ಒಂದು ಕಟ್ಟಿಗೆ ಮಿಲ್ ಧಗದಗನೆ ಉರಿದ ಪ್ರಸಂಗ ಬುಧವಾರ ರಾತ್ರಿ ನಡೆದಿದೆ. ಭದ್ರಾವತಿಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಕ್ಕೆ ಹತ್ತಿರದಲ್ಲಿರುವ ಮಂಜುನಾಥ ಸಾಮಿಲ್ ಹೊತ್ತಿ ಉರಿದ ಪರಿಣಾಮವಾಗಿ ಲಕ್ಷಾಂತರ ರೂ. ಮೌಲ್ಯದ ಕಟ್ಟಿಗೆ, ಮರದ ದಿನ್ನೆ ಮತ್ತು ಕಟ್ಟಿಗೆ ಹೊಟ್ಟು ಸುಟ್ಟು ಬೂದಿಯಾಗಿವೆ.
ಮಿಲ್ಗೆ ಬೆಂಕಿ ಬಿದ್ದ ಕೂಡಲೇ ಯಾರೋ ಅಗ್ನಿಶಾಮಕ ದಳ ಕಚೇರಿಗೆ ಫೋನ್ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಒಂಬತ್ತು ಫೈರ್ ಎಂಜಿನ್ ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕಿಳಿದರೂ ಬೆಂಕಿಯನ್ನು ತಹಬದಿಗೆ ತರುವುದು ಕಷ್ಟವಾಗಿದೆ. ಕಟ್ಟಿಗೆ ಎಷ್ಟಕ್ಕಾದರೂ ಉರುವಲು ಆಗಿ ಉಪಯೋಗಿಸಲ್ಪಡುತ್ತದೆ ತಾನೆ? ಹಾಗಾಗಿ ಮಿಲ್ಲಿನ ಎಲ್ಲ ಕಡೆ ಬೆಂಕಿ ಹರಡಿದೆ ಮತ್ತು ಅದೇ ಆವರಣದಲ್ಲಿರುವ ಕಟ್ಟಡ ಮತ್ತು ಗಿಡಮರಗಳಿಗೂ ಆವರಿಸಿದೆ.
ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಅಂತ ಇನ್ನೂ ಗೊತ್ತಾಗಿಲ್ಲ. ಶಾಟ್ ಸರ್ಕೀಟ್ ಆಗಿರುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಕಾರಣ ಏನೇ ಇರಲಿ ಮಿಲ್ಲಿನ ಮಾಲೀಕ ಮಾತ್ರ ಅಪಾರ ನಷ್ಟ ಅನುಭವಿಸಿರುವುದು ಸತ್ಯ.
ಇದನ್ನೂ ಓದಿ: ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ ಕಾರ್ಯಕರ್ತರು, ಡಿಸೆಂಬರ್ 30ರ ವಿಡಿಯೋ ವೈರಲ್