ಇರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಮಾನ ಇಂದು ರಾತ್ರಿ ದೆಹಲಿಗೆ ಆಗಮನ

Updated on: Jun 18, 2025 | 6:52 PM

ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ 90 ವಿದ್ಯಾರ್ಥಿಗಳು ಸೇರಿದಂತೆ 110 ಭಾರತೀಯ ವಿದ್ಯಾರ್ಥಿಗಳು ಇರಾನ್‌ನಿಂದ ಅರ್ಮೇನಿಯಾ ಮೂಲಕ ಭಾರತಕ್ಕೆ ಕಮರ್ಷಿಯಲ್ ವಿಮಾನ ಹತ್ತಿದ್ದಾರೆ. ಅವರು ಇಂದು ರಾತ್ರಿ ಭಾರತದ ರಾಷ್ಟ್ರೀಯ ರಾಜಧಾನಿ ದೆಹಲಿಗೆ ಆಗಮಿಸುತ್ತಾರೆ. ಈ ವಿದ್ಯಾರ್ಥಿಗಳು ಅರ್ಮೇನಿಯಾದಿಂದ ದೋಹಾ ತಲುಪಿದರು, ಅಲ್ಲಿಂದ ಅವರು ನವದೆಹಲಿಗೆ ವಿಮಾನ ಹತ್ತಿದರು.

ನವದೆಹಲಿ, ಜೂನ್ 18: ಇರಾನ್‌ನಿಂದ (Iran) ಸ್ಥಳಾಂತರಿಸಲಾದ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಮಾನವು ಇಂದು (ಬುಧವಾರ) ರಾತ್ರಿ ದೆಹಲಿಗೆ ತಲುಪಲಿದೆ. ಕಾಶ್ಮೀರದ 90 ವಿದ್ಯಾರ್ಥಿಗಳು ಸೇರಿದಂತೆ 110 ವಿದ್ಯಾರ್ಥಿಗಳನ್ನು ಮೊದಲೇ ಅರ್ಮೇನಿಯಾಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ದೋಹಾದಿಂದ ದೆಹಲಿಗೆ ಹೋಗುವ ವಿಮಾನವು ಇಂದು ರಾತ್ರಿ 10.15ರ ಸುಮಾರಿಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ.

ಇರಾನ್‌ನಲ್ಲಿ 4,000ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಇದ್ದಾರೆ. ಅವರಲ್ಲಿ ಅರ್ಧ ಭಾಗದಷ್ಟು ವಿದ್ಯಾರ್ಥಿಗಳು ಇದ್ದಾರೆ. ಅನೇಕ ವಿದ್ಯಾರ್ಥಿಗಳು ಜಮ್ಮು ಮತ್ತು ಕಾಶ್ಮೀರದವರಾಗಿದ್ದು, ವೈದ್ಯಕೀಯ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ. “ಕಾಶ್ಮೀರ ಕಣಿವೆಯ 90 ವಿದ್ಯಾರ್ಥಿಗಳು ಮತ್ತು ವಿವಿಧ ರಾಜ್ಯಗಳ ಇತರರು ಅಂದರೆ 110 ಜನರು ಅರ್ಮೇನಿಯಾವನ್ನು ಸುರಕ್ಷಿತವಾಗಿ ದಾಟಿದ್ದಾರೆ. ಅವರಲ್ಲಿ ಹೆಚ್ಚಿನವರು ಉರ್ಮಿಯಾ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ