ಕಿತ್ತೂರು ಸಂಸ್ಥಾನ ನೋಡಿಲ್ಲವಾದರೆ ಬನ್ನಿ ಸಸ್ಯಕಾಶಿ ಲಾಲ್​ಬಾಗ್​ಗೆ, ಸ್ವಾತಂತ್ರ್ಯೋತ್ಸವ ಫ್ಲಾವರ್​ ಶೋ ಆರಂಭವಾಗಿದೆ!

Updated on: Aug 07, 2025 | 1:07 PM

ಗಾಜಿನಮನೆಯಲ್ಲಿ ಮಾಡಿರುವ ಹೂಗಳ ಅಲಂಕಾರ, ವೀರವನಿತೆಯರ ಪ್ರತಿಮೆಗಳು, ರಾಯಣ್ಣನನ್ನು ಗಲ್ಲಿಗೇರಿಸಲಾದ ನಂದಗಢ್, ಆಗಿನ ರಾಜಗುರು ಪ್ರಭುಸ್ವಾಮಿಯವರು ಚಿತ್ರ ಮತ್ತು ಪ್ರತಿಮೆ ನೋಡುಗರನ್ನು ಆಕರ್ಷಿಸುತ್ತವೆ. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ 9 ಲಕ್ಷಕ್ಕೂ ಹೆಚ್ಚು ಬೇರೆ ಬೇರೆ ಬಗೆಯ ಹೂಗಳನ್ನು ಬಳಸಲಾಗಿದ್ದು, ಅವುಗಳನ್ನು ಕಣ್ಮನ ಸೆಳೆಯುವಂತೆ ಅಲಂಕರಿಸಲು 150 ನುರಿತ ಕಲಾವಿದರ ಸೇವೆಯನ್ನು ಪಡೆದುಕೊಳ್ಳಲಾಗಿದೆ.

ಬೆಂಗಳೂರು, ಆಗಸ್ಟ್ 7: ಕಿತ್ತೂರು ಚೆನ್ನಮ್ಮ (Kittur Channamma) ಬ್ರಿಟಿಷ ವಿರುದ್ಧ ನಡೆಸಿದ ಹೋರಾಟ, ಅವರ ಬದುಕು, ರಾಜ್ಯಭಾರ, ಐಕ್ಯಹೊಂದಿದ ಸ್ಥಳ ಮತ್ತು ಅವರ ಸೇನಾಧಿಪತಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೋರಾಟಮಯ ಬದುಕಿನ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಬೇಕಾದರೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಸ್ಯಕಾಶಿ ಲಾಲ್​ಬಾಗ್ ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ನೋಡಲೇಬೇಕು. ಈ ವರ್ಷದ ಫ್ಲಾವರ್ ಶೋ ಥೀಮ್ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ. ಅವರಿಬ್ಬರ ಪ್ರತಿಮೆಗಳು, ಪ್ರತಿಮೆಗಳ ಸುತ್ತ ಮಾಡಿರುವ ಬಗೆಬಗೆ ಹೂಗಳ ಅಲಂಕಾರ, ಇಬ್ಬರ ಬಗ್ಗೆ ನೀಡಿರುವ ಮಾಹಿತಿ, ಮತ್ತು ಚಿತ್ರಗಳು ನೋಡುಗರ ಮನಸೂರೆಗೊಳ್ಳುತ್ತವೆ. 30 ಅಡಿ ಸುತ್ತಳತೆ ಮತ್ತು 18 ಅಡಿ ಎತ್ತರದ ಕೆಳದಿಯ ಕೋಟೆಯನ್ನು 1.75 ಲಕ್ಷ ಹೂಗಳನ್ನು ಬಳಸಿ ನಿರ್ಮಿಸಲಾಗಿದೆಯಂತೆ.

ಇದನ್ನೂ ಓದಿ:   Lalbagh Flower Show: ಇಂದಿನಿಂದ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ; ಸಮಯ, ಟಿಕೆಟ್​ ದರ, ಇಲ್ಲಿದೆ ಮಾಹಿತಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ