ಡಾಕ್ಟರ್ ಹೇಳುವ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ನಿಮ್ಮ ಹಾರ್ಟ್ ಸದಾ ಅಲರ್ಟ್ ಅಗಿರುತ್ತದೆ, ಸಂಶಯ ಬೇಡ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2021 | 8:30 PM

ನೀರು, ಹಣ್ಣಿನ ರಸಗಳನ್ನು ಹೆಚ್ಚು ಸೇವಿಸಿದಷ್ಟು ಉತ್ತಮ. ದ್ರವ ಪದಾರ್ಥಗಳಲ್ಲಿ ಮದ್ಯಪಾನ ಸೇರುವುದಿಲ್ಲ, ಅದು ಮತ್ತು ಸಿಗರೇಟ್-ಬೀಡಿಗಳಿಂದ ಗಾವುದ ಆಂತರ ಮೆಂಟೇನ್ ಮಾಡಿ. ಲಿಕ್ಕರ್ ಯಾವುದೇ ಆಗಿರಲಿ ಅದು ಆರೋಗ್ಯಕ್ಕೆ ನಾಟ್ ಗುಡ್ ಅಂತ ಎಲ್ಲ ವೈದ್ಯರು ಹೇಳುತ್ತಾರೆ.

ಈಗಿನ ಕಾಲದಲ್ಲಿ ವಯಸ್ಸು 60 ಆದರೂ ಅದು 40 ಕ್ಕೆ ಸಮ ಎಂದು ಹೇಳುತ್ತಾರೆ. 60 ರ ನಂತರ ಹೊಸ ಇನ್ನಿಂಗ್ಸ್ ಆರಂಭವಾಗುತ್ತದೆ ಅಂತ ಹೇಳುವುದರ ಹಿಂದೆ ಆಗಾಧವಾಗಿ ಮುಂದುವರಿದಿರುವ ವೈದ್ಯಕೀಯ ವಿಜ್ಞಾನ, ಅರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಜನರಲ್ಲಿ ಮೂಡಿರುವ ಜಾಗೃತಿ ಕಾರಣ ಅಂತ ಹೇಳಲಾಗುತ್ತದೆ. ಆದರೆ ಕಳವಳಕಾರಿ ಅಂಶವೆಂದರೆ, ಕಿರಿಯ ಪ್ರಾಯದವರೂ ಅಂದರೆ 30-40 ವರ್ಷ ವಯಸ್ಸಿನವರು ಈಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿದ್ದಾರೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಪ್ರತಿನಿತ್ಯ ಜಾಗಿಂಗ್ ಮಾಡುವಮ ಜಿಮ್ಗಳಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡುತ್ತ ಬೆವರು ಸುರಿಸುವ ಯುವಕರು ಸಹ ಹಾರ್ಟ್ ಅಟ್ಯಾಕ್ಗೆ ಒಳಗಾಗುತ್ತಿದ್ದಾರೆ. ಶುಕ್ರವಾರ ಭಾರಿ ಹೃದಯಾಘಾತದಿಂದ ಸತ್ತ ಸಿದ್ಧಾರ್ಥ್ ಶುಕ್ಲ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ, ಅವರು ಜಿಮ್ಗೆ ಹೋಗಿ ದೇಹ ದಂಡಿಸದ ದಿನವಿರಲಿಲ್ಲ.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನುರಿತ ವೈದ್ಯರು ಟಿಪ್ಸ್ ನೀಡುತ್ತಾರೆ. ಬಿಡಿ ಡಾಕ್ಟ್ರೇ, ನಮಗೆ ಇಷ್ಟು ಗೊತ್ತಿಲ್ವಾ ಅಂತ ಅವರ ಸಲಹೆಯನ್ನು ಉಡಾಫೆ ಮಾಡುವವರೇ ಜಾಸ್ತಿ. ಬಹಳ ಸಿಂಪಲ್ ಸಲಹೆಗಳಿವು. ಬೆಳಗ್ಗೆ ಎದ್ದು 45 ನಿಮಿಷ ವಾಕ್ ಮಾಡಿ ಅಂತ ವೈದ್ಯರು ಎಲ್ಲರಿಗೂ ಹೇಳುತ್ತಾರೆ. ಜಿಮ್ ಹೋಗುವವರು ಅದನ್ನು ತಪ್ಪಿಸಬೇಡಿ ಅನ್ನುತ್ತಾರೆ. ನಮ್ಮ ತಾತಂದಿರೂ ವ್ಯಾಯಾಮ ಮಾಡ್ರಪ್ಪಾ ಅಂತ ಗದರುತ್ತಿದ್ದರು. ಇದು ಎಲ್ಲ ವಯಸ್ಸಿನ ಪುರುಷ ಮತ್ತು ಮಹಿಳೆಯರಿಗೆ ಬಹಳ ಮುಖ್ಯ. ದಿನಾಲೂ ವಾಕ್ ಮಾಡಿ ನೋಡಿ, ನಿಮಗೆ ವ್ಯತ್ತಾಸ ಗೊತ್ತಾಗುತ್ತದೆ.

ಮಾನಸಿಕ ಒತ್ತಡ, ಖಿನ್ನತೆ, ಇತರ ಮಾನಸಿಕ ಕಾಯಿಲೆಗಳು ಮತ್ತು ಹೃದಯದ ಗಟ್ಟಿಯಾದ ಸಂಬಂಧವಿದೆ, ಇವು ನಮ್ಮ ಹೃದಯವನ್ನು ದುರ್ಬಲಗೊಳಿಸುತ್ತವೆ. ಮನಸ್ಸಿಗೆ ನೋವು ಉಂಟು ಮಾಡುವ ಭಾವನೆಗಳ ಮೇಲೆ ಹಿಡಿತ ಸಾಧಿಸಿರಿ. ಹೃದಯದ ಮೇಲೆ ಒತ್ತಡ ಬೀಳದಿದ್ದರೆ ಅದು ಆರೋಗ್ಯದಿಂದ ನಳನಳಿಸುತ್ತಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ತೂಕದ ಮೇಲೆ ಗಮನವಿರಬೇಕು. ಸೇವಿಸುವ ಆಹಾರ ಸಮತೋಲನದಿಂದ ಕೂಡಿರಬೇಕು.

ನೀರು, ಹಣ್ಣಿನ ರಸಗಳನ್ನು ಹೆಚ್ಚು ಸೇವಿಸಿದಷ್ಟು ಉತ್ತಮ. ದ್ರವ ಪದಾರ್ಥಗಳಲ್ಲಿ ಮದ್ಯಪಾನ ಸೇರುವುದಿಲ್ಲ, ಅದು ಮತ್ತು ಸಿಗರೇಟ್-ಬೀಡಿಗಳಿಂದ ಗಾವುದ ಆಂತರ ಮೆಂಟೇನ್ ಮಾಡಿ. ಲಿಕ್ಕರ್ ಯಾವುದೇ ಆಗಿರಲಿ ಅದು ಆರೋಗ್ಯಕ್ಕೆ ನಾಟ್ ಗುಡ್ ಅಂತ ಎಲ್ಲ ವೈದ್ಯರು ಹೇಳುತ್ತಾರೆ.

ಅಧಿಕ ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ ಈಗ ಸಾಮಾನ್ಯವಾಗಿ ಬಿಟ್ಟಿವೆ. ಇವು ರೋಗಗಳಲ್ಲವಾದ್ದರಿಂದ ವಾಸಿ ಮಾಡಲು ಆಗುವುದಿಲ್ಲ. ಆದರೆ ವೈದ್ಯರು ಮೆಡಿಸಿನ್ ಮೂಲಕ ಅವುಗಳನ್ನು ನಿಯಂತ್ರಣದಲ್ಲಿಡುವ ವಿಧಾನ ಹೇಳುತ್ತಾರೆ. ಡಿಸಾರ್ಡರ್ ಗಳೆಂದು ಕರೆಸಿಕೊಳ್ಳುವ ಹೈ ಬಿಪಿ ಮತ್ತು ಡಯಾಬಿಟೀಸ್ ನಿಂದ ಬಳಲುತ್ತಿರುವವರು, ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ ತಮ್ಮ ಹೃದಯದ ಕಡೆ ಜಾಸ್ತಿ ಗಮನ ನೀಡಿದರೆ ಉಳಿದವರ ಹಾಗೆ ಆರಾಮವಾಗಿ ಜೀವಿಸಬಹುದು.

ಆಹಾರದ ಬಗ್ಗೆ ಹೇಳುವುದಾದರೆ (ಇದು ಎಲ್ಲರಿಗೂ ಅನ್ವಯ) ಜಂಕ್ ಫುಡ್ ಬೇಡ ಮಾರಾಯ್ರೇ. ಉರಿದ-ಕರಿದ, ಹೆಚ್ಚು ಮಸಾಲೆ-ಎಣ್ಣೆ ಇರುವ ಆಹಾರ ಪದಾರ್ಥಗಳು ಬೇಡವೇ ಬೇಡ. ಆಹಾರದಲ್ಲಿ ಎಣ್ಣೆ-ಉಪ್ಪು-ಖಾರ-ಮಸಾಲೆ ಹಿತಮಿತವಾಗಿರಲಿ. ನಿಮಗೆ ನಾನ್ ವೆಜ್ ಓಕೆ ಅನ್ನೋದಾದ್ರೆ ಮೀನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಿ. ಸಸ್ಯಾಹಾರಿಗಳಿಗೆ ಹಸಿರು ಸೊಪ್ಪುಗಳು ಬೆಸ್ಟ್.

ಈ ಸಿದ್ಧ ಸೂತ್ರಗಳನ್ನು ನಮ್ಮ ಆರೋಗ್ಯ ಬಗ್ಗೆ ನಮಗಿಂತ ಹೆಚ್ಚು ಕಾಳಜಿವಹಿಸುವ ವೈದ್ಯರು ನೀಡುತ್ತಾರೆ. ಪ್ಲೀಸ್ ಫಾಲೋ ಮಾಡಿ ಮತ್ತು ಆರೋಗ್ಯವಂತರಾಗಿರಿ.

ಇದನ್ನೂ ಓದಿ:  ಚರ್ಚ್​ನಲ್ಲಿ ಚಿರು-ಮೇಘನಾ ರಾಜ್​ ಪುತ್ರನ ನಾಮಕರಣ; ಕ್ರೈಸ್ತ ಸಂಪ್ರದಾಯದ ವಿಡಿಯೋ ಇಲ್ಲಿದೆ