ಯಾರದ್ದೋ ನಿರ್ಲಕ್ಷ್ಯಕ್ಕೆ ಇದ್ದೊಬ್ಬನೇ ಮಗನನ್ನು ಕಳೆದುಕೊಂಡ ಅಶ್ವಿನ್ ಅವರಮ್ಮ ಬದುಕಿನಡೀ ಕೊರಗಬೇಕು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 14, 2022 | 8:10 PM

ವಸುಧಾ ಅವರಾಡುವ ಮಾತುಗಳು ಕರಳು ಹಿಂಡುತ್ತವೆ. ಒಬ್ಬನೇ ಮಗನನ್ನು ಬಹಳ ಕಷ್ಟಪಟ್ಟು ಸಾಕಿದ್ದೆ ಎಂದು ರೋದಿಸುತ್ತಿರುವ ಅವರಿಗೆ ಇನ್ನು ಬೇರೆ ಯಾವುದೇ ಆಸರೆಯಿಲ್ಲ. ಕೇವಲ ಎರಡು ದಿನಗಳ ಹಿಂದೆ ಅವರು ಅಶ್ವಿನ್​ಗೆ ರಸ್ತೆಗುಂಡಿ ಬಗ್ಗೆ ಎಚ್ಚರಿಸಿದ್ದರು.

ಬೆಂಗಳೂರಲ್ಲಿ ಯಮಸ್ವರೂಪಿ ರಸ್ತೆಗುಂಡಿಗಳು (potholes) ಪದೇಪದೆ ಜನರ ಪ್ರಾಣ ತೆಗೆದುಕೊಂಡರೂ ಮಹಾನಗರದ ಸಿವಿಕ್ ಏಜೆನ್ಸಿಗಳಿಗೆ (civic agencies) ಕಳವಳ ಇಲ್ಲ, ಕರುಣೆ ಇಲ್ಲ, ಪಶ್ಚಾತ್ತಾಪ ಅನ್ನೋದಿಲ್ಲ ನಾಚಿಕೆ ಅಂತೂ ಇಲ್ಲವೇ ಇಲ್ಲ. ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ (negligence) ಸೋಮವಾರದಂದು ಈ ತಾಯಿ ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡಿದ್ದಾರೆ. ಅವರು ಪಡುತ್ತಿರುವ ಯಾತನೆ ನೋಡಿ. ಇನ್ನು ಮುಂದೆ ಅವರಿಗೆ ಯಾವ ಆಸರೆಯೂ ಇಲ್ಲ. ಬೇರೆ ಯಾರದ್ದೋ ತಪ್ಪಿಗೆ ಈ ತಾಯಿ ಜೀವನವಿಡೀ ಮಗನನ್ನು ನೆನೆಯುತ್ತಾ ಕೊರಗಬೇಕು. ರವಿವಾರ ರಾತ್ರಿ ಬೆಂಗಳೂರಿನ ಎಮ್ ಎಸ್ ಪಾಳ್ಯ ವಾರ್ಡ್ ನ ಮುನೇಶ್ಚರ ಬ್ಲಾಕ್ ನಲ್ಲಿ ರಸ್ತೆಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದ ಅಶ್ವಿನ್ ಅವರ ಅಮ್ಮ ಇವರು, ಹೆಸರು ವಸುಧಾ.

ವಸುಧಾ ಅವರಾಡುವ ಮಾತುಗಳು ಕರಳು ಹಿಂಡುತ್ತವೆ. ಒಬ್ಬನೇ ಮಗನನ್ನು ಬಹಳ ಕಷ್ಟಪಟ್ಟು ಸಾಕಿದ್ದೆ ಎಂದು ರೋದಿಸುತ್ತಿರುವ ಅವರಿಗೆ ಇನ್ನು ಬೇರೆ ಯಾವುದೇ ಆಸರೆಯಿಲ್ಲ. ಬಹಳ ಕಷ್ಟಪಟ್ಟು ಅವನನ್ನು ಬೆಳೆಸಿದ್ದೆ, ನಾನು ಅವನಿಗಾಗಿ ಅವನು ನನಗಾಗಿ ಬದುಕುತ್ತಿದ್ದೆವು ಎನ್ನುವ ಅವರಿಗೆ ಪಾಟ್ ಹೋಲ್ ಬಗ್ಗೆ ಗೊತ್ತಿತ್ತಂತೆ. ಕೇವಲ ಎರಡು ದಿನಗಳ ಹಿಂದೆ ಅವರು ಅಶ್ವಿನ್ಗೆ ರಸ್ತೆಗುಂಡಿ ಬಗ್ಗೆ ಎಚ್ಚರಿಸಿದ್ದರು.

ವಿಧಿಯಾಟ ನೋಡಿ ಹೇಗಿದೆ? ಇದು ವಿಧಿಯಾಟಕ್ಕಿಂತ ಅಥವಾ ಬಿ ಬಿ ಎಮ್ ಪಿ ಇಲ್ಲವೇ ಬೆಂಗಳೂರು ಜಲಮಂಡಳಿ ಎಸಗಿರುವ ಅಪರಾಧ ಅಂತ ಹೇಳಬೇಕು.

ವಸುಧಾ ಅವರು ಕೂತು ದುಃಖಿಸುತ್ತಿರೋದು ಎಮ್ ಎಸ್ ಪಾಳ್ಯದ ಅವೇಕ್ಷಾ ಅಸ್ಪತ್ರೆ ಆವರಣದಲ್ಲಿ. ರವಿವಾರ ರಾತ್ರಿ ಅಶ್ವಿನ್ ರನ್ನು ಇದೇ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಶ್ವಿನ್ ಮರಣ ಹೊಂದಿದ ಬಳಿಕ ದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋದಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಸುಧಾ ಮಾಧ್ಯಮದವರ ಜೊತೆ ತಮ್ಮ ನೋವು ಸಂಕಟ ಹೇಳಿಕೊಂಡರು.

ಇದನ್ನೂ ಓದಿ:  ಅಶ್ವಿನ್ ಪ್ರಾಣ ಕಳೆದುಕೊಂಡ ನಂತರ ಬಿ ಬಿ ಎಮ್ ಪಿ ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿದೆ!