ಸಚಿವ ಸೋಮಶೇಖರ್ ಈಗ ಸಿನಿಮಾ ನಟ; ಬಿಸಿ ಪಾಟೀಲ ನಿರ್ಮಾಣದ ಚಿತ್ರದಲ್ಲಿ ಅವರಿಗೂ ಒಂದು ಪಾತ್ರ!
ಪಾಟೀಲರು ಈಗಲೂ ಸಿನಿಮಾಗಳ ನಿರ್ಮಾಣ ಮಾಡುತ್ತಾರೆ. ಅವರ ಹೊಸ ಚಿತ್ರ ‘ಗರಡಿ’ ಸೆಟ್ಟೇರಿದ್ದು ಇದರ ವಿಶೇಷತೆಯೆಂದರೆ, ಅವರೊಂದಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಹಕಾರ ಸಚಿವರಾಗಿರುವ ಎಸ್ ಟಿ ಸೋಮಶೇಖರ್ ಅವರು ಸಿನಿಮಾನಲ್ಲಿ ನಟಿಸುತ್ತಿರುವುದು.
ಬೆಂಗಳೂರು: ಸಿನಿಮಾ ಮತ್ತು ರಾಜಕೀಯದ (politics) ನಡುವೆ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಸಿನಿಮಾ ರಂಗದಲ್ಲಿ ಹೆಸರು ಮಾಡಿ ರಾಜಕೀಯ ಪ್ರವೇಶಿಸಿದವರ ಚಿಕ್ಕದೇನಲ್ಲ. ಆದರೆ ರಾಜಕಾರಣಿಗಳು ಸಿನಿಮಾಗಳಲ್ಲಿ ಅಭಿನಯಿಸಿದ ವಿರಳ ಉದಾಹರಣೆಗಳು ನಮಗೆ ಸಿಗುತ್ತವೆ. ಇದನ್ನು ಯಾಕೆ ಹೇಳಬೇಕಾಗಿದೆ ಅಂದರೆ ಸಚಿವ ಬಿಸಿ ಪಾಟೀಲ (BC Patil) ಗೊತ್ತಲ್ಲ? ಇವರದ್ದು ಬಹುಮುಖ ಪ್ರತಿಭೆ ಮಾರಾಯ್ರೇ. ಮೊದಲು ಅವರ ಪೊಲೀಸ್ ಇಲಾಖೆಯಲ್ಲಿ (police department) ಇನ್ಸ್ಪೆಕ್ಟರ್ ಆಗಿದ್ದರು. ಆಮೇಲೆ ಸಿನಿಮಾ ಕ್ಷೇತ್ರ ಪ್ರವೇಶಿಸಿದರು. ಸುಮಾರು 30 ವರ್ಷಗಳ ಹಿಂದೆ ತೆರೆಕಂಡ ಮತ್ತು ಸಾಹಸ ಸಿಂಹ ದಿವಂಗತ ವಿಷ್ಣವರ್ಧನ್ ಅವರು ನಾಯಕರಾಗಿ ನಟಿಸಿಸ ‘ನಿಷ್ಕರ್ಷ’ ಚಿತ್ರದಲ್ಲಿ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಬಳಿಕ ಪಾಟೀಲ ಸುಮಾರು 30 ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರ ನಿರ್ಮಾಣದ ‘ಕೌರವ’ ಚಿತ್ರ ಬಾಕ್ಸಾಫೀಸಿನಲ್ಲಿ ಯಶ ಕಂಡ ನಂತರ ಅವರ ಹೆಸರಿನ ಜೊತೆ ಕೌರವ ಸೇರಿಕೊಂಡಿತು. ಆಮೇಲೆ ಅವರು ರಾಜಕೀಯ ಪ್ರವೇಶಿಸಿ ಶಾಸಕರಾಗಿದ್ದು, ಮಂತ್ರಿಯಾಗಿದ್ದು ಈಗ ಇತಿಹಾಸ.
ಪಾಟೀಲರು ಈಗಲೂ ಸಿನಿಮಾಗಳ ನಿರ್ಮಾಣ ಮಾಡುತ್ತಾರೆ. ಅವರ ಹೊಸ ಚಿತ್ರ ‘ಗರಡಿ’ ಸೆಟ್ಟೇರಿದ್ದು ಇದರ ವಿಶೇಷತೆಯೆಂದರೆ, ಅವರೊಂದಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಹಕಾರ ಸಚಿವರಾಗಿರುವ ಎಸ್ ಟಿ ಸೋಮಶೇಖರ್ ಅವರು ಸಿನಿಮಾನಲ್ಲಿ ನಟಿಸುತ್ತಿರುವುದು.
ಅಂದಹಾಗೆ, ಪಾಟೀಲ್ ಸಹ ‘ಗರಡಿ’ ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಸೋಮಾಶೇಖರ್ ನಿರ್ವಹಿಸುತ್ತಿರುವ ಪಾತ್ರದ ಹೆಸರು ಸೋಮಣ್ಣ ಅಂತೆ ಮತ್ತು ಸಿನಿಮಾನಲ್ಲೂ ಅವರು ಹಾಗೂ ಪಾಟೀಲ ಸ್ನೇಹಿತರಂತೆ.
ಗರಡಿ ಚಿತ್ರವನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸಿನಿಮಾ ಚಿತ್ರೀಕರಣ ಬೆಂಗಳೂರಿನ ಜಿ ವಿ ಆಯ್ಯರ್ ಸ್ಟುಡಿಯೋನಲ್ಲಿ ನಡೆಯುತ್ತಿದೆ. ಯಶಸ್ ಸೂರ್ಯ ಚಿತ್ರದ ನಾಯಕ ನಟನಾಗಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಈಗಲೇ ಶುರು ‘ಜೇಮ್ಸ್’ ಜಾತ್ರೆ: ಅಪ್ಪು ಫ್ಯಾನ್ಸ್ ಜೋಶ್ ಹೇಗಿದೆ ತಿಳಿಯಲು ಈ ವಿಡಿಯೋ ನೋಡಿ