ಕಾಡಿನಲ್ಲಿ ಬಳ್ಳಿಗೆ ಸಿಲುಕಿದ್ದ ಕರಡಿಯನ್ನು ರಕ್ಷಿಸಿದ್ದು ಹೇಗೆ? ನೋಡಿ

| Updated By: sandhya thejappa

Updated on: Apr 08, 2022 | 12:27 PM

2 ವರ್ಷದ ಗಂಡು ಕರಡಿ ಇದಾಗಿದ್ದು, ರಕ್ಷಣೆ ನಂತರ ಕಾಡಿಗೆ ಮರಳಿದೆ. ಅರಣ್ಯ ಸಿಬ್ಬಂದಿ ಹಾಗೂ ಪಶುವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರವಾರ: ಕಾಡಿನಲ್ಲಿ (Forest) ಬಳ್ಳಿಗೆ ಸಿಲುಕಿದ್ದ ಜಾಂಬುವಂತನನ್ನು (Bear) ರಕ್ಷಣೆ ಮಾಡಲಾಗಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರ ಅರಣ್ಯ ವಲಯ ವ್ಯಾಪ್ತಿಯ, ಓರಲಗಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾಡು ಬಳ್ಳಿಗೆ ಕೊರಳು ಸಿಲುಕಿಕೊಂಡು ಕರಡಿ ಕೂಗುತ್ತಿತ್ತು. ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ನೋಡಿ ಕರಡಿಯನ್ನು ಸಂರಕ್ಷಣೆ ಮಾಡಿದ್ದಾರೆ. ಪಶುವೈದ್ಯಾಧಿಕಾರಿಗಳು ಅರಣ್ಯ ಸಿಬ್ಬಂದಿಗಳಿಂದ ಜಾಂಬುವಂತನ ರಕ್ಷಣೆ ಮಾಡಿದ್ದಾರೆ. 2 ವರ್ಷದ ಗಂಡು ಕರಡಿ ಇದಾಗಿದ್ದು, ರಕ್ಷಣೆ ನಂತರ ಕಾಡಿಗೆ ಮರಳಿದೆ. ಅರಣ್ಯ ಸಿಬ್ಬಂದಿ ಹಾಗೂ ಪಶುವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಒಟಿಟಿಯಲ್ಲಿ ‘ಜೇಮ್ಸ್​’ ಪ್ರಸಾರಕ್ಕೆ ದಿನಗಣನೆ ಶುರು; ಏ.14ಕ್ಕಾಗಿ ಕಾದಿರುವ ಪುನೀತ್​ ಅಭಿಮಾನಿಗಳು

Literature: ನೆರೆನಾಡ ನುಡಿಯೊಳಗಾಡಿ; ಒಣಗಿದೆಲೆಗಳ ಮೇಲೆ ಸಾವಕಾಶ ಅಡಿಯಿರಿಸಿ, ಎಂದೋ ಒಮ್ಮೆ ನೆರಳು ಕೊಟ್ಟಿದ್ದವಿವು