ಒಟಿಟಿಯಲ್ಲಿ ‘ಜೇಮ್ಸ್​’ ಪ್ರಸಾರಕ್ಕೆ ದಿನಗಣನೆ ಶುರು; ಏ.14ಕ್ಕಾಗಿ ಕಾದಿರುವ ಪುನೀತ್​ ಅಭಿಮಾನಿಗಳು

James Movie on OTT platform: ‘ಸೋನಿ ಲಿವ್​’ ಒಟಿಟಿ ಮೂಲಕ ‘ಜೇಮ್ಸ್​’ ಚಿತ್ರ ಪ್ರಸಾರ ಆಗಲಿದೆ. ಏ.14ರಿಂದ ಮನೆಯಲ್ಲೇ ಕುಳಿತು ಈ ಸಿನಿಮಾ ನೋಡಲು ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಕಾದಿದ್ದಾರೆ.

ಒಟಿಟಿಯಲ್ಲಿ ‘ಜೇಮ್ಸ್​’ ಪ್ರಸಾರಕ್ಕೆ ದಿನಗಣನೆ ಶುರು; ಏ.14ಕ್ಕಾಗಿ ಕಾದಿರುವ ಪುನೀತ್​ ಅಭಿಮಾನಿಗಳು
ಪುನೀತ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 08, 2022 | 10:16 AM

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಇಹಲೋಹ ತ್ಯಜಿಸಿದ್ದರೂ ಕೂಡ ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುತ್ತಾರೆ. ಅವರು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್​’ ಸೂಪರ್ ಹಿಟ್​ ಆಗಿದೆ. ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಗಳಿಸಿದ ಬಗ್ಗೆ ವರದಿ ಆಗಿತ್ತು. ಕಾರಣಾಂತರಗಳಿಂದ ಚಿತ್ರಮಂದಿರದಲ್ಲಿ ಈ ಸಿನಿಮಾ ಹೆಚ್ಚು ದಿನ ಪ್ರದರ್ಶನ ಕಂಡಿಲ್ಲ. ಥಿಯೇಟರ್​ನಲ್ಲಿ ‘ಜೇಮ್ಸ್​’ ಸಿನಿಮಾ (James Movie) ನೋಡಲು ಸಾಧ್ಯವಾಗದೇ ಇರುವವರು ಈಗ ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಶೀಘ್ರದಲ್ಲೇ ಈ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಹೌದು, ಜೇಮ್ಸ್​ ಸಿನಿಮಾದ ಒಟಿಟಿ ಪ್ರೀಮಿಯರ್​ಗೆ ದಿನಗಣನೆ ಆರಂಭ ಆಗಿದೆ. ಸೋನಿ ಲಿವ್​ (Sony Liv) ಒಟಿಟಿ ಪ್ಲಾಟ್​ಫಾರ್ಮ್​ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ. ಆ ದಿನಾಂಕಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಚೇತನ್​ ಕುಮಾರ್ ನಿರ್ದೇಶನದ ‘ಜೇಮ್ಸ್​’ ಚಿತ್ರಕ್ಕೆ ಕಿಶೋರ್​ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್​ ನಟಿಸಿದ್ದಾರೆ. ಹಲವು ವಿಶೇಷತೆಗಳನ್ನು ಒಳಗೊಂಡ ಈ ಚಿತ್ರಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಅಪ್ಪು ಅವರನ್ನು ಬಹುವಾಗಿ ಮಿಸ್​ ಮಾಡಿಕೊಳ್ಳಲಾಗುತ್ತಿದೆ.

ಅದ್ದೂರಿ ಆ್ಯಕ್ಷನ್​, ಸೂಪರ್​ ಮೇಕಿಂಗ್​ನಿಂದಾಗಿ ‘ಜೇಮ್ಸ್​’ ಸಿನಿಮಾ ಸದ್ದು ಮಾಡಿದೆ. ಎರಡು ಶೇಡ್​ನ ಪಾತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಅಬ್ಬರಿಸಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ಅನೇಕ ಕಲಾವಿದರು ಇದ್ದಾರೆ. ಶಿವರಾಜ್​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಡಬ್ಬಿಂಗ್​ ಮುಗಿಯುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್ ಅವರು ನಿಧನರಾಗಿದ್ದು ನೋವಿನ ಸಂಗತಿ. ಬಳಿಕ ಶಿವರಾಜ್​ಕುಮಾರ್​ ಅವರು ಅಪ್ಪು ಪಾತ್ರಕ್ಕೆ ಡಬ್​ ಮಾಡಿದರು.

ಪುನೀತ್​ ರಾಜ್​ಕುಮಾರ್​ ಅವರಿಗೆ ಎಲ್ಲ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಆ ಕಾರಣಕ್ಕಾಗಿ ಹಲವು ಭಾಷೆಗಳಿಗೆ ಡಬ್​ ಮಾಡಿ ‘ಜೇಮ್ಸ್​’ ಚಿತ್ರವನ್ನು ಮಾ.17ರಂದು ಬಿಡುಗಡೆ ಮಾಡಲಾಗಿತ್ತು. ಈಗ ಒಟಿಟಿಯಲ್ಲೂ ಪ್ರೇಕ್ಷಕರು ಎಲ್ಲ ಭಾಷೆಯ ವರ್ಷನ್​ನಲ್ಲಿ ಸಿನಿಮಾ ನೋಡಬಹುದು. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್​ ಕೂಡ ಏ.14ರಿಂದ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಸೋನಿ ಲಿವ್​ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಹಿಂದೆ ಕೂಡ ಪುನೀತ್​ ಅವರ ಅನೇಕ ಸಿನಿಮಾಗಳು ಹಿಂದಿಗೆ ಡಬ್​ ಆಗಿ ಟಿವಿ ಮತ್ತು ಯೂಟ್ಯೂಬ್​ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದುಂಟು.

View this post on Instagram

A post shared by SonyLIV (@sonylivindia)

‘ದಿ ಕಾಶ್ಮೀರ್​ ಫೈಲ್ಸ್​’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳು ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಕಾರಣ ‘ಜೇಮ್ಸ್​’ ಸಿನಿಮಾಗೆ ಥಿಯೇಟರ್​ಗಳ ಸಂಖ್ಯೆ ಇಳಿಕೆ ಆಯಿತು ಎಂಬ ಮಾತು ಕೇಳಿಬಂದಿತ್ತು. ಆ ಬಗ್ಗೆ ಚಿತ್ರತಂಡದವರು ನಂತರ ಸ್ಪಷ್ಟನೆ ನೀಡಿದ್ದರು. ಅದೇನೇ ಇರಲಿ, ಗಲ್ಲಾಪೆಟ್ಟಿಗೆಯಲ್ಲಿ ‘ಜೇಮ್ಸ್​’ ಜಯಭೇರಿ ಬಾರಿಸಿದೆ. ಆ ಪ್ರಯುಕ್ತ ಚಿತ್ರತಂಡ ಅದ್ದೂರಿಯಾಗಿ ಸಕ್ಸಸ್​ ಮೀಟ್​ ಮಾಡಿಕೊಂಡಿತು. ಚಿತ್ರಮಂದಿರದಲ್ಲಿ ಯಶಸ್ಸು ಕಂಡ ಬಳಿಕ ಈಗ ಒಟಿಟಿಯಲ್ಲೂ ಈ ಚಿತ್ರ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.

ಸಿನಿಮಾ ನೋಡಿ ದೊಡ್ಮನೆ ಕುಟುಂಬ ಭಾವುಕ:

ಪುನೀತ್​ ರಾಜ್​ಕುಮಾರ್​ ಅವರ ನಿಧನದಿಂದ ಡಾ. ರಾಜ್​ಕುಮಾರ್​ ಫ್ಯಾಮಿಲಿಗೆ ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಆ ನೋವಿನ ನಡುವಿನಲ್ಲೇ ಜೀವನ ಮುಂದುವರಿಯಬೇಕಾದ್ದು ಅನಿವಾರ್ಯ. ‘ಜೇಮ್ಸ್​’ ಬಿಡುಗಡೆ ಆದಾಗ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ವಿನಯ್​ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಸೇರಿದಂತೆ ಅಣ್ಣಾವ್ರ ಕುಟುಂಬದ ಬಹುತೇಕರು ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿದ್ದರು. ಹಲವು ದಿನಗಳ ಬಳಿಕ ಸಿನಿಮಾ ನೋಡಿದ ಗೀತಾ ಶಿವರಾಜ್​ಕುಮಾರ್​ ಅವರು ಸಖತ್​ ಎಮೋಷನಲ್​ ಆಗಿದ್ದರು.

ಇದನ್ನೂ ಓದಿ:

3 ದಿನ ಸಾರಿ ಕೇಳಿದ್ರು ಪುನೀತ್​; ಅದಕ್ಕೆ ಕಾರಣ ಆಗಿದ್ದ ಆ ಘಟನೆ ಬಗ್ಗೆ ವಿವರಿಸಿದ ‘ಜೇಮ್ಸ್​’ ವಿಲನ್​

ಪುನೀತ್​ ರಾಜ್​ಕುಮಾರ್​ ಫೋಟೋ ಹಿಡಿದು ಕೆಂಡ ಹಾಯ್ದ ಅಭಿಮಾನಿ; ಎಲ್ಲೆಲ್ಲೂ ಅಪ್ಪು ಸ್ಮರಣೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ