ವಿಜಯನಗರ: ಫಸಲು ಕಾಯಲು ತೆರಳಿದ್ದ ರೈತನ ಮೇಲೆ 3 ಕರಡಿಗಳ ದಾಳಿ; ಗಂಭೀರ ಗಾಯ

ವಿಜಯನಗರ: ಫಸಲು ಕಾಯಲು ತೆರಳಿದ್ದ ರೈತನ ಮೇಲೆ 3 ಕರಡಿಗಳ ದಾಳಿ; ಗಂಭೀರ ಗಾಯ
ಪ್ರಾತಿನಿಧಿಕ ಚಿತ್ರ

Vijayanagara: ರೈತ ಮಹಾಂತೇಶ ಎಂಬವರ ಮೇಲೆ ಕರಡಿ ದಾಳಿ ಮಾಡಿದೆ. ದಾಳಿಗೊಳಗಾದ ತಲೆ, ಬೆನ್ನು, ಹೊಟ್ಟೆ, ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

TV9kannada Web Team

| Edited By: ganapathi bhat

Apr 05, 2022 | 4:02 PM

ವಿಜಯನಗರ: ಫಸಲು ಕಾಯಲು ತೆರಳಿದ್ದ ರೈತನ ಮೇಲೆ 3 ಕರಡಿಗಳು ದಾಳಿ ಮಾಡಿದ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ರೈತ ಮಹಾಂತೇಶ ಎಂಬವರ ಮೇಲೆ ಕರಡಿ ದಾಳಿ ಮಾಡಿದೆ. ದಾಳಿಗೊಳಗಾದ ತಲೆ, ಬೆನ್ನು, ಹೊಟ್ಟೆ, ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇತ್ತ, ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ದುರ್ಘಟನೆ ವಿಜಯಪುರದ ಪೊಲೀಸ್ ತರಬೇತಿ ಕೇಂದ್ರದ ಬಳಿ ಸಂಭವಿಸಿದೆ. ವಿಜಯಪುರ ತಾಲೂಕಿನ ಮದಬಾವಿ ತಾಂಡಾದ ಮಹಿಳೆ ಸಾವನ್ನಪ್ಪಿದ್ದಾರೆ. ಚಾಲಕ, ಮತ್ತಿಬ್ಬರು ಮಹಿಳೆಯರು ಹಾಗೂ ಒಟ್ಟು ಐದು ಮಂದಿಗೆ ಗಾಯ ಆಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಂಧಿಚೌಕ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಅಟೋ ಮೇಲೆ ಬೃಹತ್ ಮರ ಮುರಿದು ಬಿದ್ದ ಘಟನೆಯಲ್ಲಿ ಐವರು ಜನರಿಗೆ ಗಂಭೀರ ಗಾಯವಾಗಿದೆ. ಪೊಲೀಸ್ ತರಬೇತಿ‌ ಕೇಂದ್ರದ ಆವರಣದಲ್ಲಿದ್ದ ಮರ ಬಿದ್ದು ವಿಜಯಪುರ ‌ನಗರದ ಸಿದ್ದಾರೂಢ ಕಾಲೋನಿಯ ನಿವಾಸಿ ಯಲ್ಲಮ್ಮಾ ಕೊಂಡಗೂಳಿ (45) ಸಾವನ್ನಪ್ಪಿದ್ದಾರೆ. ಇಂದುತಾಯಿ ಕುಲಕರ್ಣಿ, ಚಂದ್ರಕಲಾ ವಾಲೀಕಾರ, ಮಂದಾಕಿನಿ ಬಡಿಗೇರ, ಸುವರ್ಣಾ ಮಜ್ಜಿಗಿ, ಅಟೋ ಚಾಲಕ ಸಚಿನ ರಾಠೋಡ್ ಎಂಬವರಿಗೆ ಗಾಯವಾಗಿದೆ. ವಿಜಯಪುರ ತಾಲೂಕಿನ ಮದಬಾವಿ ತಾಂಡಾದ ಅಟೋ‌ ಚಾಲಕ ಗಾಯಗೊಂಡಿದ್ದಾರೆ. ಸಂಬಂಧಿಕರ ಮನೆಯಲ್ಲಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಹೋಗುತ್ತಿದ್ದ ವೇಳೆ ನಡೆದ ಅವಘಡ ಸಂಭವಿಸಿದೆ.

ಗಾಯಾಗಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ಸ್ಥಿತಿ‌ ಚಿಂತಾಜನಕ ಆಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಮರ ತೆರವಿಗೆ ಅರಣ್ಯ‌ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ದಾವಣಗೆರೆ: ಹೆರಿಗೆ ಆದ ಬಳಿಕ ಮಗು ಬಿಟ್ಟು ಹೋದ ತಾಯಿ.

ಹೆರಿಗೆ ಆದ ಬಳಿಕ ತಾಯಿ ಮಗುವನ್ನು ಬಿಟ್ಟು ಹೋದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 29 ರಂದು ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ತಾಯಿ‌ ಜನ್ಮ ನೀಡಿದ್ದರು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಿದ್ದ ಹಿನ್ನೆಲೆ ಸರ್ಕಾರಿ ಮಹಿಳಾ‌ ಮತ್ತು ಮಕ್ಕಳ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಗುವಿನ ಆರೈಕೆ ಮಾಡಲಾಗಿತ್ತು. ಆದರೆ, ಹೆರಿಗೆ ಆಗಿ ಎಳು ದಿನವಾದ್ರೂ ತಾಯಿ ಮತ್ತು ಸಂಬಂಧಿಕರು‌ ಪತ್ತೆ ಆಗಿಲ್ಲ.

ತಾಯಿ ಮತ್ತು ಸಂಬಂಧಿಕರು ಪತ್ತೆ ಆಗದ ಹಿನ್ನೆಲೆ ಬಸವನಗರ ಠಾಣೆಯ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಒಂದು ಕೆಜಿ 50 ಗ್ರಾಂ ತೂಕದ ಗಂಡು ಮಗುವಿಗೆ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಇದೇ ಆಸ್ಪತ್ರೆಯಲ್ಲಿ ಈ ಮೊದಲು ಒಂದು ಗಂಡು ಮಗ ಅಪರಣ ಆಗಿತ್ತು. ಇದೇ ಆಸ್ಪತ್ರೆ ಯಲ್ಲಿ ಮಾರ್ಚ 16 ರಂದು ಗಂಡು ಮಗು ಅಪಹರಣ ಪ್ರಕರಣ ನಡೆದಿತ್ತು. ಆ ಘಟನೆಯಲ್ಲಿ ಅಪಹರಣಕ್ಕೆ ಒಳಗಾದ ಮಗು ಇನ್ನೂ ಪತ್ತೆಯಾಗಿಲ್ಲ. ಮಗುವಿಗಾಗಿ ತಾಯಿ ಪರಿತಪಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಹೊಸ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮಂಗಳೂರು: ಕೆಫೆಯಲ್ಲಿ ಮೂವರು ಯುವತಿಯರ ಹೊಡೆದಾಟ; ಜಗಳ ಬಿಡಿಸಲು ಪರದಾಡಿದ ಹುಡುಗರು

ಇದನ್ನೂ ಓದಿ: ವಿಜಯಪುರ: ನಮ್ಮಲ್ಲಿ ಬೇಧಭಾವ ಇಲ್ಲ, ಎಲ್ಲರೂ ಕೂಡಿ ಜಾತ್ರೆ ಮಾಡುತ್ತೇವೆ; ಸೌಹಾರ್ದತೆಗೆ ಸಾಕ್ಷಿಯಾದ ಗುರುಚಕ್ರವರ್ತಿ ಸದಾಶಿವ ಜಾತ್ರೆ

Follow us on

Related Stories

Most Read Stories

Click on your DTH Provider to Add TV9 Kannada