ರಾಮನ ಕುರಿತ ಹೊಸ ಹಾಡನ್ನು ಬಿಡುಗಡೆ ಮಾಡಿದ ಬಸವರಾಜ ಬೊಮ್ಮಾಯಿ
ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲೇ ಬೆಂಗಳೂರಿನಲ್ಲಿ ರಾಮನಾಮದ ಜಪ ಜೋರಾಗಿದೆ. ಜಯಶ್ರೀ ಅರವಿಂದ್ ಪ್ರತಿಷ್ಠಾನದಿಂದ ರಾಮನಾಮ ಸ್ಮರಣೆಗೆ ರಾಮ ಬಂದಾನೋ ಗೀತೆ ಸೇರ್ಪಡೆಯಾಗಿದ್ದು, ರಾಮನ ಕುರಿತ ಹೊಸ ಹಾಡನ್ನು ಇಂದು (ಶುಕ್ರವಾರ) ಬಿಡುಗಡೆ ಮಾಡಲಾಯ್ತು.
ಬೆಂಗಳೂರು, ಜನವರಿ 19: ಅಯೋಧ್ಯೆಯಲ್ಲಿ (Ayodhya) ಬಾಲ ರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲೇ ಬೆಂಗಳೂರಿನಲ್ಲಿ (Benglauru) ರಾಮನಾಮದ ಜಪ ಜೋರಾಗಿದೆ. ಜಯಶ್ರೀ ಅರವಿಂದ್ ಪ್ರತಿಷ್ಠಾನದಿಂದ ರಾಮನಾಮ ಸ್ಮರಣೆಗೆ ರಾಮ ಬಂದಾನೋ ಗೀತೆ ಸೇರ್ಪಡೆಯಾಗಿದ್ದು, ರಾಮನ ಕುರಿತ ಹಾಡನ್ನು ಇಂದು (ಶುಕ್ರವಾರ) ಬಿಡುಗಡೆ ಮಾಡಲಾಯ್ತು. ಬಸವನಗುಡಿಯ ಉತ್ತರಾಧಿಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಹಾಡನ್ನು ಅನಾವರಣಗೊಳಿಸಿದರು. ರಾಮ ಬಂದಾನೋ ಹಿಂದಿ ಗೀತೆಯನ್ನ ಜಯಶ್ರೀ ಅರವಿಂದ್ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದು, ಈ ಹಾಡಿಗೆ ಖ್ಯಾತ ಗಾಯಕ ಅಜಯ್ ವಾರಿಯರ್ ಹಾಗೂ ಗಾಯಕಿ ಶ್ರಿರಕ್ಷಾ ಪ್ರಿಯರಾಮನ್ ಧ್ವನಿ ನೀಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಮೂಡಿಬಂದಿರುವ ರಾಮನ ಹಾಡು, ಭಕ್ತಿ ಭಾವ ಮೂಡಿಸುತ್ತದೆ. ಜೊತೆಗೆ ರಾಮಮಂದಿರದ ಸಂದರ್ಭದಲ್ಲೇ ಈ ಗೀತೆ ಹಾಡುವ ಅವಕಾಶ ಸಿಕ್ಕಿದ್ದಕ್ಕೆ ಗಾಯಕರು, ಹಾಗೂ ಜಯಶ್ರೀ ಅರವಿಂದ್ ಸಂತಸ ಹಂಚಿಕೊಂಡರು. ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ಹೊತ್ತಲ್ಲೇ ಈ ಹಾಡು ಬಿಡುಗಡೆ ಯಾಗುತ್ತಿರುವುದಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಸಂತಸ ವ್ಯಕ್ತಪಡಿಸಿದರು.