ಡಿಕೆ ಶಿವಕುಮಾರ್ ಮನೆ ಮುಂದೆಯೂ ಗುಂಡಿ ಮಾಡಿಕೊಳ್ಳಲಿ: ಸಿಸಿ ಪಾಟೀಲ್ ವ್ಯಂಗ್ಯ
ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಗುಂಡಿ ಗದ್ದಲ ಜೋರಾಗಿದೆ. ಬರೀ ಬೆಂಗಳೂರಿನಲ್ಲಿ ಮಾತ್ರ ರಸ್ತೆ ಗುಂಡಿಗಳಿವೆಯಾ? ಎಲ್ಲಾ ರಾಜ್ಯಗಳಲ್ಲೂ ಗುಂಡಿ ಸಮಸ್ಯೆ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು, ಪ್ರಧಾನಿ ಮನೆ ಬಳಿಯೂ ಗುಂಡಿಗಳಿವೆ ಎಂದಿದ್ದಾರೆ. ಡಿಕೆ ಶಿವಕುಮಾರ್ ಮಾತಿಗೆ ಸಿಸಿ ಪಾಟೀಲ್ ಕಾಲೆಳೆದಿದ್ದಾರೆ. ಡಿಕೆಶಿ ಮನೆ ಮುಂದೆಯೂ ಗುಂಡಿ ತೋಡಿಕೊಳ್ಳಲಿ ಎಂದಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 23: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದ ಎದುರಿನ ರಸ್ತೆಗಳಲ್ಲಿಯೂ ಗುಂಡಿಗಳಿವೆ ಎಂದಿರುವುದಕ್ಕೆ ಬಿಜೆಪಿ ನಾಯಕ ಸಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ. ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಸಿಪಾಟೀಲ್, ಹಾಗಾದರೆ, ಡಿಕೆ ಶಿವಕುಮಾರ್ ಮನೆ ಮುಂದೆಯೂ ಹೊಂಡ ಮಾಡಿಕೊಳ್ಳಲಿ ಎಂದರು. ಅಲ್ಲದೆ, ಬಿಜೆಪಿ ಇದ್ದಾಗ ಮಾಡಿಲ್ಲ ಅಂತಲೇ ನೀವು ಅಧಿಕಾರಕ್ಕೆ ಬಂದಿರೋದು. ಈಗ ಮಾಡದಿದ್ದರೆ ನೀವು ಹೋಗಲು ಸಿದ್ಧರಾಗಿರಿ, ನಾವೇ ಬರುತ್ತೇವೆ ಎಂದರು.
