ಬಮೂಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಸ್ಪರ್ಧೆ

Updated on: May 17, 2025 | 1:13 PM

ವಿಶ್ರಾಂತಿ ಬೇಕಿದೆ ಅಂತಿದ್ರಲ್ಲ ಸಾರ್, ಯಾಕೆ ನಿರ್ಧಾರ ಬದಲಾಯಿಸಿದ್ದು ಅಂತ ಪತ್ರಕರ್ತರೊಬ್ಬರು ಕೇಳಿದಾಗ, ತನ್ನ ಮನಸ್ಸು ಈಗಲೂ ರೆಸ್ಟ್ ಮೂಡಲ್ಲೇ ಇದೆ ಎಂದು ಅವರು ಹೇಳುತ್ತಾರೆ. ಆದರೆ, ಪಕ್ಷದ ಕಾರ್ಯಕರ್ತರು, ಮತ್ತು ಹಿರಿಯ ನಾಯಕರು ಸ್ಪರ್ಧಿಸುವಂತೆ ಒತ್ತಾಯ ಮಾಡಿರುವುದನ್ನು ನಿರಾಕರಿಸಲಾಗುತ್ತಿಲ್ಲ ಎಂದು ಮಾಜಿ ಸಂಸದ ಹೇಳುತ್ತಾರೆ.

ಬೆಂಗಳೂರು, ಮೇ 17: ರಾಜಕೀಯದಲ್ಲಿರುವವರಿಗೆ ಅದರಿಂದ ದೂರ ಇರೋದು ಸಾಧ್ಯವಾಗಲಾರದು. ಕಳೆದ ಲೋಕ ಸಭಾ ಚುನಾವಣೆಯಲ್ಲಿ (Lok Sabha polls) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸೋತ ಬಳಿಕ ರೆಸ್ಟ್ ತೆಗೆದುಕೊಳ್ಳುತ್ತೇನೆ ಎಂದಿದ್ದ ಡಿಕೆ ಸುರೇಶ್ ಸಹಕಾರ ಸಂಘಗಳ ಚುನಾವಣಾ ಕ್ಷೇತ್ರಕ್ಕೆ (ಡೈರಿ ರಾಜಕೀಯ) ಕಾಲಿಡುತ್ತಿದ್ದಾರೆ. ಕನಕಪುರ ಬಮೂಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಅವರು ಸ್ಪರ್ಧಿಸುವ ನಿರ್ಧಾರ ಮಾಡಿದ್ದು ಇವತ್ತು ಬೆಂಗಳೂರಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ರಾಮನಗರ ಜಿಲ್ಲೆಯ ನಾಯಕರ ಆಗ್ರಹದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಸುರೇಶ್ ಹೇಳುತ್ತಾರೆ.

ಇದನ್ನೂ ಓದಿ:  ನಾನು ಮಾಜಿ ಸಂಸದ ಡಿಕೆ ಸುರೇಶ್​ ಪತ್ನಿ ಎಂದು ವಿಡಿಯೋ ಹರಿಬಿಟ್ಟಿದ್ದ ಮಹಿಳೆ ಅರೆಸ್ಟ್​!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ