ಕರ್ನಾಟಕ ಭವನದ ಶಂಕುಸ್ಥಾಪನೆ ನೆರವೇರಿಸಿದ್ದ ನನಗೆ ಉದ್ಘಾಟನಾ ಸಮಾರಂಭಕ್ಕೆ ಆಮಂತ್ರಣವಿರಲಿಲ್ಲ: ಪರಮೇಶ್ವರ್

Updated on: Apr 03, 2025 | 12:17 PM

ನಿನ್ನೆ ಸಿದ್ಧಗಂಗಾ ಮಠದಲ್ಲಿ ನಡೆದ ಶ್ರೀ ಶಿವಕುಮಾರ್ ಸ್ವಾಮಿಗಳ 118ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಕೇಳಿದಾಗ, ಬೇರೆ ಯಾವುದೋ ಕೆಲಸದ ನಿಮಿತ್ತ ಹೋಗಲಾಗಿಲ್ಲ, ಆದರೆ ತನ್ನ ತಂದೆಯವರ ಕಾಲದಿಂದಲೂ ಮಠದ ಜೊತೆ ಅವಿನಾಭಾವ ಸಂಬಂಧವಿದೆ, ತಾನು ಯಾವಾಗ ಬೇಕಾದರೂ ಮಠಕ್ಕೆ ಹೋಗಿ ಶ್ರೀಗಳಿಗೆ ಗೌರವ ಸಲ್ಲಿಸಿ ಬರಬಹುದು ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು, ಏಪ್ರಿಲ್ 3: ಗೃಹ ಸಚಿವ ಜಿ ಪರಮೇಶ್ವರ್ ನಿನ್ನೆ ದೆಹಲಿಯಲ್ಲಿ ನಡೆದ ನೂತನ ಕರ್ನಾಟಕ ಭವನ ಉದ್ಘಾಟನಾ ಸಮಾರಂಭದಲ್ಲಿ (Karnataka Bhavan opening ceremony) ಭಾಗಿಯಾಗಲು ಆಹ್ವಾನ ನೀಡದಿರುವುದಕ್ಕೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. ಅಸಲಿಗೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇ ತಾನು, ಅದರೆ ಉದ್ಘಾಟನಾ ಸಮಾರಂಭಕ್ಕೆ ತನಗೆ ಆಮಂತ್ರಣ ನೀಡಿಲ್ಲ, ಹಾಗಂತ ಬೇಸರವೇನೂ ಇಲ್ಲ, ಸಮಸ್ತ ಕನ್ನಡಿಗರ ಪರವಾಗಿ ಮುಖ್ಯಮಂತ್ರಿಯವರು ಕಟ್ಟಡದ ಉದ್ಘಾಟನೆ ನೆರವೇರಿಸಿದ್ದಾರೆ, ಅಷ್ಟು ಸಾಕು ಎಂದು ಪರಮೇಶ್ವರ್ ಹೇಳಿದರು.

ಇದನ್ನೂ ಓದಿ:     ಸಿಎಂ ಆರೋಗ್ಯ ವಿಚಾರಿಸಲು ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದರಂತೆ: ಜಿ ಪರಮೇಶ್ವರ್, ಗೃಹ ಸಚಿವ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ