AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಧನ ಕೊರತೆ ವದಂತಿ: ಕೊಪ್ಪಳದಲ್ಲಿ ಪೆಟ್ರೋಲ್​​ ತುಂಬಿಸಲು ಬ್ಯಾರಲ್​​ ತಂದ ಜನ!

ಇಂಧನ ಕೊರತೆ ವದಂತಿ: ಕೊಪ್ಪಳದಲ್ಲಿ ಪೆಟ್ರೋಲ್​​ ತುಂಬಿಸಲು ಬ್ಯಾರಲ್​​ ತಂದ ಜನ!

ಶಿವಕುಮಾರ್ ಪತ್ತಾರ್
| Edited By: |

Updated on:Mar 29, 2026 | 1:36 PM

Share

ಕೊಪ್ಪಳದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ವದಂತಿಗಳಿಂದ ಜನರು ಬ್ಯಾರಲ್‌ಗಳಲ್ಲಿ ಇಂಧನ ಸಂಗ್ರಹಿಸುತ್ತಿದ್ದಾರೆ. ಇದೇ ವೇಳೆ, ಗದಗದಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆ ಉಂಟಾಗಿದ್ದು, ನರಗುಂದದ ಸಂಜೂ ಹೋಟೆಲ್ ಸೇರಿದಂತೆ ಹಲವಾರು ಹೋಟೆಲ್‌ಗಳು ಬಂದ್ ಆಗಿವೆ. ಗಲ್ಫ್ ರಾಷ್ಟ್ರಗಳ ಯುದ್ಧದ ಭೀತಿಯು ಈ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ.

ಕೊಪ್ಪಳ, ಮಾರ್ಚ್​​ 29: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ವದಂತಿಗಳು ಹಬ್ಬಿದ್ದು, ಇದು ಜನರಲ್ಲಿ ಆತಂಕ ಸೃಷ್ಟಿಸಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಬ್ಯಾರಲ್, ಬಾಟಲ್ ಹಾಗೂ ಕ್ಯಾನ್‌ಗಳಲ್ಲಿ ಇಂಧನ ಸಂಗ್ರಹಿಸಲು ಜನರು ಮುಗಿಬಿದ್ದಿದ್ದಾರೆ. ಬಂಕ್ ಸಿಬ್ಬಂದಿ ಇಂಧನ ಲಭ್ಯತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮನವಿ ಮಾಡುತ್ತಿದ್ದರೂ, ಬೆಲೆ ಏರಿಕೆ ಅಥವಾ ಪೂರೈಕೆ ವ್ಯತ್ಯಯದ ಭೀತಿಯಿಂದ ಜನರು ಇದಕ್ಕೆ ಕಿವಿಗೊಡುತ್ತಿಲ್ಲ.ಮುಂದೆ ಸಮಸ್ಯೆ ಆಗಬಹುದು ಅಥವಾ ಬೆಲೆ ಹೆಚ್ಚಳ ಆಗಬಹುದು ಎಂಬ ಭೀತಿಯಿಂದ ಜನರು ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲ್ ಅಥವಾ ಕ್ಯಾನ್‌ಗಳಲ್ಲಿ ಇಂಧನ ನೀಡಲು ಕಟ್ಟುನಿಟ್ಟಾಗಿ ನಿರಾಕರಿಸಲಾಗಿದ್ದರೂ, ಹಲವೆಡೆ ಜನರು ಮನವೊಲಿಸಿ ಇಂಧನ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Mar 29, 2026 10:50 AM
Follow Us