Loading video

ಜೊತೆಯಾಗಿ ಊಟ ಮಾಡಲೂ ಹೈಕಮಾಂಡ್ ಅನುಮತಿ ಬೇಕಾ ಅಂತ ಕೇಳಿದರೆ ಪರಮೇಶ್ವರ್ ಸಮಂಜಸ ಉತ್ತರ ನೀಡಲಿಲ್ಲ

|

Updated on: Jan 08, 2025 | 11:51 AM

ಶಾಸಕರು ಜೊತೆಗೂಡಿ ಊಟ ಮಾಡಲು ಸಹ ಹೈಕಮಾಂಡ್ ಅನುಮತಿ ಪಡೆಯಬೇಕೇ? ಅಂತ ಕೇಳಿದರೆ, ಅದು ಬರೀ ಡಿನ್ನರ್ ಮೀಟಿಂಗ್ ಅಗಿರಲಿಲ್ಲ, 7ಗಂಟೆಗೆ ಸಭೆ ಸೇರಲು ಆಹ್ವಾನಿಸಲಾಗಿತ್ತು, ಮೊದಲು 2-3 ತಾಸುಗಳ ಕಾಲ ಚರ್ಚೆ ನಡೆಯುತಿತ್ತು, ಚರ್ಚೆಯ ನಂತರ ನಿಮ್ಮ ಮನೆಗಳಿಗೆ ಹೋಗಿ ಊಟ ಮಾಡಿ ಅಂತ ಹೇಳಲಾಗಲ್ಲ, ಹಾಗಾಗೇ ಊಟದ ಏರ್ಪಾಟು ಮಾಡಲಾಗಿತ್ತು ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ದಲಿತ ಸಮುದಾಯದ ಶಾಸಕರು ಮತ್ತು ನಾಯಕರ ಜೊತೆ ಗೃಹಸಚಿವ ಜಿ ಪರಮೇಶ್ವರ್ ನಡೆಸಬೇಕೆಂದಿದ್ದ ಡಿನ್ನರ್ ಮೀಟಿಂಗ್ ರದ್ದಾಗಿದೆ. ಅದರೆ ಸಚಿವ ಹೇಳುವ ಪ್ರಕಾರ ಅದು ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ. ಪಕ್ಷದ ಬ್ಯಾನರ್ ಅಡಿಯಲ್ಲಿ ಮೀಟಿಂಗ್ ಮಾಡೋದಾದರೆ ಹೈಕಮಾಂಡ್ ವಿರೋಧ ಯಾಕೆ ಅಂತ ಕೇಳಿದರೆ, ಅವರು ವಿರೋಧಿಸಿಲ್ಲ ಮುಂದೂಡಲು ಹೇಳಿದ್ದಾರೆ, ಚಿತ್ರದುರ್ಗದಲ್ಲಿ ಆಯೋಜಿಸಿದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು, ಸಭೆಯನ್ನು ಮುಂದೂಡಿದರೆ ತಾನು ಭಾಗಿಯಾಗುವೆ ಅಂತ ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಹೇಳಿದ್ದಾರೆ, ಹಾಗಾಗಿ ಪ್ರಸ್ತಾಪಿತ ಡಿನ್ನರ್ ಮೀಟಿಂಗ್ ಪೊಸ್ಟ್​ಪೋನ್ ಆಗಿದೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾನು, ಪರಮೇಶ್ವರ್ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ, ಮೀಟಿಂಗ್​ಗಳ ಬಗ್ಗೆ ಅನಗತ್ಯ ಗೊಂದಲ ಬೇಡ: ಮಹದೇವಪ್ಪ