ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್ ಅಚ್ಚರಿಯ ಹೇಳಿಕೆ

Updated on: Jun 27, 2025 | 11:47 AM

ಸೆಪ್ಟೆಂಬರ್​ನಲ್ಲಿ ಕ್ರಾಂತಿಯಾಗಲಿದೆ, ಬದಲಾವಣೆಯಾಗಲಿದೆ ಎಂಬ ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿಕೆಗೆ ಪುಷ್ಟ ನೀಡುವಂತೆ ಇದೀಗ ಗೃಹ ಸಚಿವ ಡಾ. ಜಿ ಪರಮೇಶ್ವರ ಮಾತನಾಡಿರುವುದು ಕುತೂಹಲ ಸೃಷ್ಟಿಸಿದೆ. ರಾಜಣ್ಣ ಹಾಗೆ ಹೇಳಿದ್ದಾರೆ ಎಂದರೆ ಅವರಿಗೆ ಏನೋ ಸುಳಿವು ಸಿಕ್ಕಿರಬಹುದು ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್ ರಾಜಕಾರಣದ ಬಗ್ಗೆ ಕೌತುಕ ಹೆಚ್ಚಿಸಿದೆ.

ಬೆಂಗಳೂರು, ಜೂನ್ 27: ಸಚಿವ ಕೆಎನ್ ರಾಜಣ್ಣ ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ಅವರು ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಬದಲಾವಣೆ ಆಗುತ್ತದೆ ಎಂಬಂಥ ಮಾತು ಆಡಿದ್ದಾರೆ. ಅವರಿಗೆ ಯಾವುದೋ ಮಾಹಿತಿ ಇರಬೇಕು. ಇಲ್ಲದೆ ಇದ್ದರೆ ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇರುವ ಸಚಿವರು ಆ ರೀತಿಯ ಮಾತು ಆಡಲು ಸಾಧ್ಯವಿಲ್ಲ ಎಂಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಣ್ಣ ಆ ರೀತಿ ಹೇಳಿದ್ದಾರೆ. ಆದರೆ, ನಮ್ಮ ನನ್ನ ಗಮನಕ್ಕೆ ಯಾವುದೇ ವಿಚಾರ ಬಂದಿಲ್ಲ. ಅವರವರ ಗಮನಕ್ಕೆ ಬಂದಂತೆ ಅವರವರು ಮಾತನಾಡುತ್ತಾರೆ. ರಾಜಣ್ಣಗೆ ಏನಾದರೂ ಸುಳಿವು ಸಿಕ್ಕಿರಬಹುದು ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದ ಕೆಎನ್ ರಾಜಣ್ಣ: ಕ್ರಾಂತಿ, ಪವರ್‌ ಸೆಂಟರ್‌ ಹೇಳಿಕೆಯಿಂದ ಸಂಚಲನ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 27, 2025 11:44 AM